ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯದ ವೇಳೆ ‘ನರ್ಸಿಂಗ್ ಬ್ರೇಕ್’  ನೀಡಲು ಆದೇಶ.

kannada t-shirts

ಬೆಂಗಳೂರು,ಜೂನ್,10,2022(www.justkannada.in): ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯದ ವೇಳೆಯಲ್ಲಿ ನರ್ಸಿಂಗ್ ಬ್ರೇಕ್ ನೀಡಲು ಆದೇಶ ಹೊರಡಿಸಲಾಗಿದೆ.

ಈ ಕುರಿತು ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತರಾ ನಿಶಾ ಜೇಮ್ಸ್ ಸುತ್ತೋಲೆ ಹೊರಡಿಸಿದ್ದಾರೆ.  ಮಹಿಳಾ ಸರ್ಕಾರಿ ನೌಕರರಿಗೆ ಮಾತೃತ್ವದ ರಜೆ  ಮುಗಿಸಿದ ನಂತರ ಮೆಟರ್ನಿಟಿ ಟೆನಿಫಿಟ್ ಆಕ್ಟ್-1961ರ ನಿಯಮ 11 ಹಾಗೂ ಕರ್ನಾಟಕ ಮೆಟರ್ನಿಟಿ ಟೆನಿಫಿಟ್ ರೂಲ್ಸ್ 966 ನಿಯಮ-6 ರನ್ವಯ ಪ್ರತಿದಿನ 02 ಅವಧಿಯ ಬಿಡುವನ್ನು(15 ನಿಮಿಷ ಮಗುವಿನ ಜೊತೆಗೆ ಹಾಗೂ 5 ರಿಂದ 15 ನಿಮಿಷದವರೆಗೆ ಮಗುವಿರುವ ಸ್ಥಳಕ್ಕೆ ಹೋಗಿ ಬರಲು ತಗಲುವ ಸಮಯ) ಮಗುವಿಗೆ 5 ತಿಂಗಳು ಮುಗಿಯುವವರೆಗೆ ನರ್ಸಿಂಗ್ ಬ್ರೇಕ್ ಅನ್ನು ಕರ್ತವ್ಯದ ಅವಧಿಯಲ್ಲಿ ನೀಡಲು ಅವಕಾಶವಿರುತ್ತದೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಲಿಪಿಕ ಅಧಿಕಾರಿ/ ಸಿಬ್ಬಂದಿಗಳಿಗೆ ಗಮನಕ್ಕೆ ತರುವುದು.  ಅದರಂತೆ ಮಹಿಳಾ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮತ್ತು ಲಿಪಿಕಾ ಅಧಿಕಾರಿಗಳು ಮನವಿ ಸಲ್ಲಿಸಿದ್ದಲ್ಲಿ 02 ಅವಧಿಯ ಬಿಡುವನ್ನು ನೀಡಲು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಡಿಸಿಪಿ ನಿಶಾ ಜೇಮ್ಸ್ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Key words: Orders -women police – Nursing Break – duty

website developers in mysore