ಮುಸ್ಲಿಮರ ವಿರುದ್ಧ ಹೇಳಿಕೆ ಕೊಡುವವರ ತಲೆ ಕಡಿಯಬೇಕು- ಪ್ರಚೋದನಾತ್ಮಕ ಹೇಳಿಕೆ ನೀಡಿದ ಮುಸ್ಲೀಂ ಮುಖಂಡ.

ಮೈಸೂರು,ಜೂನ್,10,2022(www.justkannada.in): ಪ್ರವಾದಿ ಮೊಹಮ್ಮದ್‌ ಪೈಗಂಬರರ ಬಗ್ಗೆ ನೂಪುರ್‌ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ ದೇಶಾದ್ಯಂತ ಮುಸ್ಲೀಂರು ಪ್ರತಿಭಟನೆ ನಡೆಸುತ್ತಿದ್ದು ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಸ್ಲೀಂ ಮುಖಂಡ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಮೈಸೂರಿನ ಮಿಲಾದ್‌ ಪಾರ್ಕ್‌ ಬಳಿ ಎಸ್‌ಡಿಪಿಐನಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಯಲ್ಲಿ ಮೈಕ್‌ ಹಿಡಿದು ಭಾಷಣ ಮಾಡಿದ ಮುಸ್ಲಿಂ ಮುಖಂಡನೋರ್ವ,  ‘ಮುಸ್ಲಿಮರ ವಿರುದ್ಧ ಹೇಳಿಕೆ ಕೊಡುವವರ ತಲೆ ಕಡಿಯಬೇಕು. ಪ್ರವಾದಿಗೆ ಅವಮಾನ ಮಾಡಿದವರ ತಲೆ ಕಡಿಯುವುದೇ ಶಿಕ್ಷೆಯಾಗಬೇಕು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಈ ನಡುವೆ ನೂಪುರ್‌ ಶರ್ಮಾ ಹೇಳಿಕೆ ಖಂಡಿಸಿ ಚಿಕ್ಕಮಗಳೂರು, ಶಹಪುರ ಬೆಳಗಾವಿ ಸೇರಿ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ನವದೆಹಲಿ ಲಖನೌ, ಮೊರಾದಾಬಾದ್‌, ಜಮ್ಮು-ಕಾಶ್ಮೀರದ ಶ್ರೀನಗರ , ಹೈದ್ರರಾಬಾದ್‌, ಕೋಲ್ಕತ್ತಾ ಸೇರಿ ದೇಶದ ಹಲವೆಡೆ ಮುಸ್ಲಿಮರು ಧರಣಿ ನಡೆಸುತ್ತಿದ್ದು,  ನೂಪುರ್‌ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೃಪೆ: ಟಿವಿ9 ಕನ್ನಡ

Key words: statements- against-Muslims-provocative- statement-mysore