ಕೊಡಗಿನಲ್ಲಿ ಆರೆಂಜ್ ಅಲರ್ಟ್: ವರುಣನ ಅಬ್ಬರ

ಕೊಡಗು, ಅಕ್ಟೋಬರ್ 20, 2019 (www.justkannada.in): ವಾಯುಭಾರ ಕುಸಿತದಿಂದಾಗಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸುರಿಯಲಿಂದೆ ಎಂದು ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕೊಡಗಿನಲ್ಲಿ ವರುಣ ಅಬ್ಬರಿಸಿದ್ದಾರೆ. ಕೊಡಗಿನಾಧ್ಯಂತ ಭಾರಿ ಮಳೆ ಇದೀಗ ಸುರಿಯುತ್ತಿದೆ.

ಲಕ್ಷದ್ವೀಪ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮದಿಂದ ಭಾರಿ ಮಳೆ ಕೊಡಗಿನಾಧ್ಯಂತ ಸುರಿಯಲಿಂದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಡಗಿನಲ್ಲಿ ಘೋಷಿಸಿತ್ತು. 24ರ ವರೆಗೆ ಆರೆಂಜ್ ಅಲರ್ಟ್ ಕೊಡಗಿನಲ್ಲಿ ಘೋಷಿಸಲಾಗಿತ್ತು. ಇದೀಗ ಇದರ ಬೆನ್ನಲ್ಲೇ, ಇಂದು ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದೆ.

ಕೊಡಗಿನ ಮೂರು ಜಿಲ್ಲೆಗಳಲ್ಲೂ ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಮಳೆಗೆ ಕೊಡಗಿನಲ್ಲಿ ಜನ ಜೀವನ ತತ್ತರಿಸಿದೆ. ಇನ್ನೂ ಇದೇ ತಿಂಗಳು 24ರ ವರಗೆ ಆರೆಂಜ್ ಅಲರ್ಟ್ ಜಿಲ್ಲೆಯಾಧ್ಯಂತ ಘೋಷಣೆ ಮಾಡಲಾಗಿದ್ದು, ಜಿಲ್ಲಾಡಳಿತ ಕಟ್ಟೆಚ್ಚರದ ಸೂಚನೆ ನೀಡಿದೆ.