ಸಿದ್ದರಾಮಯ್ಯರನ್ನು ಅಂಡಮಾನ್-ನಿಕೋಬರ್ ನಲ್ಲಿರುವ ಜೈಲಿಗೆ ಕಳುಹಿಸಬೇಕು: ಡಿವಿ ಸದಾನಂದಗೌಡ

ಬೆಂಗಳೂರು, ಅಕ್ಟೋಬರ್ 20, 2019 (www.justkannada.in):ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಂಡಮಾನ್-ನಿಕೋಬರ್ ನಲ್ಲಿರುವ ಜೈಲಿಗೆ ಕಳುಹಿಸಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದ್ದಾರೆ.

ಅಲ್ಲಿರುವ ಸಾರ್ವರ್ಕರ್ ಜೈಲನ್ನು ಒಮ್ಮೆ ನೋಡಿಕೊಂಡು ಬಂದಾಗಲಾದರೂ ಅವರ ಬಗ್ಗೆ ಮಾತನಾಡುವುದನ್ನು ಬಿಡ್ತಾರಾ ನೋಡಬೇಕು.
ಇತಿಹಾಸವನ್ನು ನಾವೇ ಬರೆಯುತ್ತೇವೆ ಎಂದು ಇಲ್ಲ ಸಲ್ಲದ ಮಾತನ್ನು ಆಡಿದ್ದಾರೆ. ಅವರಿಗೆ ಇತಿಹಾಸವೇ ಗೊತ್ತಿಲ್ಲ.

ವೀರ ಸಾರ್ವರ್ಕರ್ ಇದ್ದಂತ ಅಂಡಮಾನ್-ನಿಕೋಬರ್ ಜೈಲಿಗೆ ವಿಮಾನ ಅಥವಾ ಹಡಗಿನಲ್ಲಿ ಟಿಕೆಟ್ ಬುಕ್ ಮಾಡಿ ಸಿದ್ದರಾಮಯ್ಯ ಕಳುಬಿಸಿಬೇಕು. ಅಲ್ಲಿ ಸಾರ್ವರ್ಕರ್ ಅವರ ಜೈಲು ಕೊಠಡಿಯನ್ನು ನೋಡಿಕೊಂಡು ಬರಲಿ ಎಂದು ಹೇಳಿದ್ದಾರೆ.