ವಿಧಾನ ಮಂಡಲ ಅಧಿವೇಶನದ ಅವಧಿ ಹೆಚ್ಚಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಪಟ್ಟು…

ಬೆಂಗಳೂರು,ಅ,12,2019(www.justkannada.in):  ಕೇವಲ ಮೂರೇ ದಿನಕ್ಕೆ  ವಿಧಾನಮಂಡಲ ಅಧಿವೇಶನ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ ಅಧಿವೇಶನದ ಅವಧಿ ಹೆಚ್ಚಿಸುವಂತೆ ಪಟ್ಟು ಹಿಡಿದರು.

ವಿಧಾನಸಭೆ ಕಲಾಪ ಆರಂಭವಾಗಿದ್ದು, ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, 15 ದಿನಗಳಿಗೆ ಕಡಿಮೆ ಇಲ್ಲದಂತೆ ವಿಧಾನಮಂಡಲ ಅಧಿವೇಶನ ಕಲಾಪ ನಡೆಸಬೇಕು.  ವಿತ್ತೀಯ ಕಾರ್ಯಕಲಾಪ ನಡೆಸಲು ಸಮಯಬೇಕು. ಪ್ರತಿಯೊಂದು ಬೇಡಿಕೆ ಮೇಲೆ ಚರ್ಚೆ ನಡೆಸಬೇಕಾಗುತ್ತೆ. ಚರ್ಚೆ ಬಳಿಕ ಬೇಡಿಕೆಗೆ ಅನುಮೋದನೆ ಪಡೆದು ನಂತರ ಮತಕ್ಕೆ ಹಾಕಬೇಕಾಗುತ್ತದೆ. ಹೀಗಾಗಿ ಕಲಾಪದ ಅವಧಿ ಹೆಚ್ಚಿಸುವಂತೆ ಒತ್ತಾಯಿಸಿದರು.

ಇದೇ ವೇಳೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಸರ್ಕಾರ ಸದನದ ನಿಯಮಾವಳಿಯನ್ನ ಉಲ್ಲಂಘಿಸಿದೆ.  ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿ ತಿರುಚುವುದು ಬೇಡ.  ಇನ್ನು ಮುಂದೆ  ಈ ರೀತಿ ಆಗದಂತೆ ಎಚ್ಚರ ವಹಿಸಿ. ನಿಮಗೆ ಸಹಕಾರ ನೀಡಿದ್ದೇವೆ. ನಿಮ್ಮ ತಪ್ಪು ಒಪ್ಪಕೊಳ್ಳಿ ಸಮರ್ಥನೆ ಮಾಡಿಕೊಳ್ಳಲು ಹೋಗಬೇಡಿ ಎಂದು ಚಾಟಿ ಬೀಸಿದರು.

Key words: Opposition leader -Siddaramaiah – increase – duration – Assembly- session