Friday, August 14, 2026

BDA Apartments

Home Front Page ಹುಲಿ ದಾಳಿಯಿಂದ ಮೃತಪಟ್ಟವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಚಾಮರಾಜನಗರ ಡಿಸಿ ಬಿ.ಬಿ ಕಾವೇರಿ…

ಹುಲಿ ದಾಳಿಯಿಂದ ಮೃತಪಟ್ಟವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಚಾಮರಾಜನಗರ ಡಿಸಿ ಬಿ.ಬಿ ಕಾವೇರಿ…

ಚಾಮರಾಜನಗರ,ಅ,12,2019(www.justkannada.in): ಹುಲಿ ದಾಳಿಯಿಂದ ಮೃತ ಪಟ್ಟವರ ಮನೆಗೆ  ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿಬಿ ಕಾವೇರಿ ಅವರು ಮೃತ ಶಿವಮಾದಯ್ಯ ಮತ್ತು ಶಿವನಂಜಪ್ಪ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಬಳಿಕ ನರಹಂತಕ ಹುಲಿಯನ್ನು ಶೀಘ್ರದಲ್ಲಿ ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಡಿಸಿ ಕಾವೇರಿ ಸೂಚನೆ ನೀಡಿದರು.

ಹಾಗೆಯೇ ಘಟನಾ ಸ್ಥಳಕ್ಕೂ  ಡಿಸಿ ಬಿ.ಬಿ ಕಾವೇರಿ ಅವರು ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದರು. ಶನಿವಾರ ಸಂಜೆ ರೈತ  ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (66) ಹುಲಿ ದಾಳಿಯಿಂದ ಸಾವನ್ನಪ್ಪಿದ್ದರು. ಮತ್ತೊಬ್ಬ ರೈತ ಶಿವನಂಜಪ್ಪ ಅವರನ್ನೂ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು.

Key words: Chamrajnagar DC- BB Kaveri- visit- tiger- attack-death