Friday, August 14, 2026

BDA Apartments

Home Front Page ಟೌನ ಶಿಪ್ ವಿರುದ್ದ ಹೋರಾಟಕ್ಕೆ Gen-Zಗಳು ಇಳಿಯಬೇಕು- ಹಿರಿಯ ಸಾಹಿತಿ ದೇವನೂರು ಮಹಾದೇವ

ಟೌನ ಶಿಪ್ ವಿರುದ್ದ ಹೋರಾಟಕ್ಕೆ Gen-Zಗಳು ಇಳಿಯಬೇಕು- ಹಿರಿಯ ಸಾಹಿತಿ ದೇವನೂರು ಮಹಾದೇವ

ಮೈಸೂರು,ಆಗಸ್ಟ್,14,2026 (www.justkannada.in):  ಬಿಡದಿ ಟೌನ್ ಶಿಪ್ ವಿರುದ್ದ ಹೋರಾಟಕ್ಕೆ  Gen-Zಗಳು ಇಳಿಯಬೇಕು ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಹಿರಿಯ ಸಾಹಿತಿ ದೇವನೂರು ಮಹಾದೇವ, ಭೂಮಿ ಕೊಡಲು 80%  ರೈತರು ಸಿದ್ದರಿದ್ದಾರೆ ಎಂದು ಹೇಳುತ್ತಿದ್ದಾರೆ.  ಈ ರೀತಿಯ ಸರ್ಕಾರದ ಧೋರಣೆ ಸರಿಯಲ್ಲ. ಸಮಾಜದ ಎಲ್ಲರೂ ಭೂಮಿ ಕೊಡ್ತೇವೆಂದರೆ ತೆಗೆದುಕೊಳ್ಳಲು ಆಗುತ್ತಾ..? ಎಂದು ಪ್ರಶ್ನಿಸಿದರು.

ಆ ಭೂಮಿ ತೆಗೆದುಕೊಂಡು ಸರ್ಕಾರ ಯಾವ ರೀತಿ ನಿಭಾಯಿಸುತ್ತೆ. ಭೂಮಿ ಕೊಟ್ಟ  ಜನರ ಕಡೆಗೆ ಸ್ಲಂಗೆ ಹೋಗಿ ಸೇರುತ್ತಾರೆ. ಸರ್ಕಾರ ಜನರ ಬದುಕನ್ನ ನೋಡಬೇಕಿದೆ. ಯಾವುದೇ ಕಾರಣಕ್ಕೂ ಬಿಡದಿ ಟೌನ್ ಶಿಪ್ ಬೇಡ ಎಂದು ದೇವನೂರು ಮಹಾದೇವ ತಿಳಿಸಿದ್ದಾರೆ.

Key words:  Gen-Z, fight, against, township, Senior writer, Devanur Mahadeva