ದಲಿತರನ್ನ ಸಿಎಂ ಮಾಡುವಂತೆ ನಳೀನ್ ಕುಮಾರ್ ಕಟೀಲ್ ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು.

ಮಂಗಳೂರು,ಜುಲೈ,23,2021(www.justkannada.in):  ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಯಡಿಯೂರಪ್ಪ ರಾಜಿನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಸವಾಲು ಹಾಕಿದ್ದಾರೆ.jk

ಮಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ  ಮಾಜಿ ಸಿಎಂ ಸಿದ್ದರಾಮಯ್ಯ ಅವರು, ದಲಿತರನ್ನು ಸಿಎಂ ಮಾಡುವ ಅವಕಾಶ ಈಗ ಬಿಜೆಪಿಗೆ ಬಂದಿದೆ. ಸಿದ್ದರಾಮಯ್ಯ ದಲಿತರನ್ನ ಸಿಎಂ ಮಾಡಲಿ ಅಂತ ಕಟೀಲ್ ಅವರು ನನಗೆ ಹೇಳಿದ್ದರು. ನಮ್ಮಲ್ಲಿ ದಲಿತರು ಸಿಎಂ ಆಗಿದ್ದಾರೆ.‌ ಹೀಗಾಗಿ ಸದ್ಯ ಅವರಿಗೆ ಆ ಅವಕಾಶ ಇದೆ,  ನಳೀನ್ ಕುಮಾರ್ ಕಟೀಲ್ ದಲಿತರನ್ನ ಸಿಎಂ ಮಾಡಲಿ. ಯಡಿಯೂರಪ್ಪರನ್ನ ಹೇಗಿದ್ದರೂ ತೆಗೀತಾರೆ, ಈಗ ದಲಿತರನ್ನ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲಿ. ದಲಿತರ ಬಗ್ಗೆ ಕಟೀಲ್ ಗೆ ಪ್ರೀತಿ ಇದೆ ಅಲ್ವಾ, ಹಾಗಾದ್ರೆ ಸಿಎಂ ಮಾಡಲಿ. ಸಾಮಾಜಿಕ ನ್ಯಾಯ ಇದೆ ಅಂತ ಹೇಳ್ತಾರೆ, ಹೀಗಾಗಿ ತಕ್ಷಣ ಬಿಜೆಪಿಯವರು ದಲಿತರನ್ನ ಸಿಎಂ ಮಾಡಲಿ ಎಂದು ಹೇಳಿದರು.

ಜನಗಳ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ಹಿಂದೆಯೂ ಇರಲಿಲ್ಲ, ಈಗ ಬರೋಕೂ ಸಾಧ್ಯವಿಲ್ಲ. 2019ರಲ್ಲಿ ಬಂದ ಪ್ರವಾಹದಿಂದ ಸಂತ್ರಸ್ತರಾದವರಿಗೇ ಇನ್ನೂ ಯಡಿಯೂರಪ್ಪ ಪರಿಹಾರ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರು ಕೊಚ್ಚಿ ಹೋಗಿವೆ. ಮನೆಗಳು ಬಿದ್ದಿವೆ. ಈಗ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆ ಮಾಡುವ ಪ್ರಯತ್ನದಲ್ಲಿ ಇದ್ದಾರೆ. ಈಗ ಯಡಿಯೂರಪ್ಪರನ್ನ ಚೇಂಜ್ ಮಾಡ್ತಾರೆ, ಆದ್ರೆ ಮುಂದೆ ಸಿಎಂ ಆಗುವವರೂ ಭ್ರಷ್ಟರೇ ಆಗಿರುತ್ತಾರೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

ಸಿಎಂ ಬಿಎಸ್ ವೈ ಬೆಂಬಲಕ್ಕೆ ಮಠಾಧೀಶರು ನಿಂತ ಬಗ್ಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು.‌ ಇಲ್ಲಿ ಜನಾಭಿಪ್ರಾಯ ಬಹಳ ಮುಖ್ಯ, ಪಕ್ಷದ ಒಳಗಿನ ವಿಚಾರಕ್ಕೆ ಯಾರೂ ಕೈ ಹಾಕಬಾರದು ಎಂದರು.

ಫೋನ್ ಕದ್ದಾಲಿಕೆಯಿಂದ ಸಮ್ಮಿಶ್ರ ಸರ್ಕಾರ ಪತನ ಆರೋಪ ವಿಚಾರ, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಇದಕ್ಕೂ ಮೊದಲು ಮಾಡಿದೆ. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ.‌ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಮಾಡಿದ್ದಾರೆ. ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ. ಇದೊಂದು ಪ್ರಜಾಪ್ರಭುತ್ವದ ಕೊಲೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಜಡ್ಜ್ ಗಳದ್ದೇ ಫೋನ್ ಕದ್ದಾಲಿಸೋದು ದೇಶದ್ರೋಹದ ಕೆಲಸ. ಇವರಿಗೆ ಸರ್ಕಾರ ಮಾಡೋಕೆ ಯೋಗ್ಯತೆ ಇಲ್ಲ, ನಾಲಾಯಕ್ ಗಳು ಇವರು ಎಂದು ಸಿದ್ದರಾಮಯ್ಯ ಕಿಡಿಕಾರಿದರು

ವಲಸಿಗ ಸಚಿವರನ್ನ ಮತ್ತೆ ಕಾಂಗ್ರೆಸ್ ಗೆ ಪಡೆದುಕೊಳ್ಳುವ  ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ,  ಅವರು ನಮ್ಮ‌ಪಕ್ಷಕ್ಕೆ ಬರ್ತಾರೆ ಅನ್ನೋದು ನನಗಂತೂ ಗೊತ್ತಿಲ್ಲ. ಪಕ್ಕಕ್ಕೆ ಅವರನ್ನ ವಾಪಾಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲೇ ಹೇಳಿದ್ದೇನೆ. ಅದಕ್ಕೆ ಈಗಲೂ ಬದ್ಧ ಎಂದರು.

ಎಲ್ಲರೂ ಒಟ್ಟಾಗಿ ಭ್ರಷ್ಡ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ನಾನು ತಿಂಗಳ ಹಿಂದೆಯೇ ಯಡಿಯೂರಪ್ಪ ಬದಲಾಗ್ತಾರೆ ಅಂದಿದ್ದೆ. ನನಗೆ ಹೈಕಮಾಂಡ್ ಮೂಲದ ಮಾಹಿತಿ ಇತ್ತು, ಆದ್ರೆ ಯಾರು ಹೊಸದಾಗಿ ಸಿಎಂ ಆಗಲಿದ್ದಾರೆ  ಅನ್ನೋ ಮಾಹಿತಿಯಿಲ್ಲ‌ ಎಂದು ಸಿದ್ದರಾಮಯ್ಯ ಅವರು ಹೇಳಿದರು.

EENGLISH SUMMARY…..

Opposition leader Siddaramaiah challenges Nalin Kumar Kateel to select a dalit as CM
Mangaluru, July 23, 2021 (www.justkannada.in): “If the BJP has any concern for dalits,’ let them select a person from dalit community for the post of CM after Yediyurappa’s resignation,” Siddaramaiah has challenged BJP State President Nalin Kumar Kateel.
Speaking to the press persons at Mangaluru today, the former Chief Minister Siddaramaiah said, “It is now the turn of BJP to select a dalit as CM. Nalin Kumar Kateel had asked me to select a dalit for the post of CM. In our party, dalits have become CMs. But now it is their turn. Let him make a dalit as CM. They will speak about social justice, then let them prove it now.”
Replying to the media questions about the seers’ support to CM Yediyurappa, Siddaramaiah said the heads of maths should not try politics. “People’s mandate is very essential here, nobody should try to interfere in the party,” he added.
In his response to the phone tapping case, Siddaramaiah said the BJP has left no stone unturned to remove the coalition government. “I have demanded a judicial probe by a Supreme Court judge in this matter. It is nothing but murder of democracy. Tapping the phones of Supreme Court and High Court judges is anti-national. They are not fit to be in power, all are useless,” he said.
Keywords: Former CM Siddaramaiah/ opposition leader/ BJP State President/ Nalin Kumar Kateel/ Dalit/ CM

Key words: Opposition leader -Siddaramaiah –challenges- Nalin Kumar Kateel – CM – Dalits