ಪೊಲೀಸರ ಕಾರ್ಯಾಚರಣೆ: ದ್ವಿಚಕ್ರ ವಾಹನ ಕಳ್ಳ ಅರೆಸ್ಟ್….

Promotion

ಮೈಸೂರು,ಜೂ,24,2020(www.justkannada.in): ಮೈಸೂರಿನ ಸರಸ್ವತಿಪುರಂ ಠಾಣಾ  ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಕಳ್ಳನನ್ನ ಬಂಧಿಸಿದ್ದಾರೆ.

ನಗರದ ಬೋಗಾದಿಯ ಚಂದನ್ ಅಲಿಯಾಸ್ ಚಂದು  ಬಂಧಿತ ಆರೋಪಿ. ಬಂಧಿತನಿಂದ ನಾಲ್ಕು ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಗಾಡಿ ಓಡಿಸುತ್ತಿದ್ದ ಹಿನ್ನೆಲೆ ಅನುಮಾನ ಬಂದು ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.Operation – police-bike- thief -Arrest.

ಟಿ. ಕೆ. ಲೇಔಟ್ ನಲ್ಲಿ ಒಂದು, ಬೋಗಾದಿ ಹಾಗೂ ಬೋಗಾದಿ ರಿಂಗ್ ರಸ್ತೆಯಲ್ಲಿ ತಲಾ ಎರಡು ಮತ್ತು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ದ್ವಿಚಕ್ರ ವಾಹನಗಳನ್ನು ಬಂಧಿತ ಆರೋಪಿ ಕಳ್ಳತನ ಮಾಡಿದ್ದನು. ಬಂಧಿತ ಆರೋಪಿಯನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Key words: Operation – police-bike- thief -Arrest.