ಮೈಸೂರು ಪೊಲೀಸರ ಕಾರ್ಯಾಚರಣೆ: ಇಬ್ಬರು ಡ್ರಗ್ಸ್ ಪೆಡ್ಲರ್ ಗಳು ಹಾಗೂ ಗಾಂಜಾ ಬೆಳೆದಿದ್ದ ಆರೋಪಿ ಬಂಧನ.

kannada t-shirts

ಮೈಸೂರು,ಡಿಸೆಂಬರ್,26,2022(www.justkannada.in): ಮೈಸೂರು ಪೊಲೀಸರು  ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ಸ್ ಪೆಡ್ಲರ್ ಗಳು ಹಾಗೂ  ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನ ಬಂಧಿಸಿದ್ದಾರೆ.

ಮೈಸೂರು ನಗರದ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿಸೆಂಬರ್ 23 ರಂದು ಮೈಸೂರು ನಗರದ ಕುವೆಂಪುನಗರ ಕೆ.ಬ್ಲಾಕ್ ಆದಿಚುಂಚನಗಿರಿ ರಸ್ತೆಯಲ್ಲಿ ದಾಳಿ ಮಾಡಿ  ಒಂದು ಬುಲೆಟ್ ಬೈಕ್‌ ನ್ನು ನಿಲ್ಲಿಸಿಕೊಂಡು ಅಲ್ಲಗೆ ಗಿರಾಕಿಗಳನ್ನು ಬರಮಾಡಿಕೊಂಡು ಅವರುಗಳಿಗೆ MDMA, ECSTASY TABLETS ಮತ್ತು LSD ಡ್ರಗ್ಸ್ ಅನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಾಗೆಯೇ  ಅವರ ಬಳಿ ಇದ್ದ 31 ಗ್ರಾಂ ತೂಕದ MDMA, ECSTASY TABLETS ಮತ್ತು LSD ಪೇಪರ್, ರೂ 5000 ನಗದು ಹಣ, ಎರಡು ಮೊಬೈಲ್‌ ಫೋನ್‌ಗಳು ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಇಬ್ಬರು ಆರೋಪಿಗಳ ಪೈಕಿ 1ನೇ ಆರೋಪಿ ಮೈಸೂರಿನ ಜೆ.ಎಸ್.ಎಸ್. ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, 2ನೇ ಆರೋಪಿ ವಕೀಲ ವೃತ್ತಿ ಮಾಡುತ್ತಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಆರೋಪಿತರು ಸದರಿ ಮಾದಕ ವಸ್ತುವನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿದ್ದರು ಹಾಗೂ ಮೈಸೂರಿನಲ್ಲಿ ಯಾರು ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಗೀತ ಎಂ.ಎಸ್ ರವರ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ. ಸಿ.ಕೆ. ಅಶ್ವತ್ಥನಾರಾಯಣ ಅವರುಗಳ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್. ಮಲ್ಲೇಶ್.ಎ, ಪಿ.ಎಸ್.ಐ ಜಂಗವಾಡ ಸಿಬ್ಬಂದಿಗಳಾದ ಅನಿಲ್‌, ಎಂ, ಸುಭಾನಲ್ಲಾ ಬಾಲದಾರ, ಗಣೇಶ್, ಶ್ರೀನಿವಾಸ್ ಪ್ರಸಾದ್‌, ಜೋಸೆಫ್ ನರೋನಾ, ರಾಧೇಶ್, ಶ್ರೀನಿವಾಸ್, ಅರುಣ್ ಮಾಡಿದ್ದಾರೆ. ‘

ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ.

ಮೈಸೂರು ನಗರದ ಉದಯಗಿರಿ ಪೋಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಲಾಲ್ ಘಾಟ್‌ ನಲ್ಲಿರುವ ಸರ್ವೆ ನಂ 48 ರ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.  ಖಾಲಿ ನಿವೇಶನದಲ್ಲಿ ಬೆಳೆಸಿದ್ದ ರೂ 3,00,000 ಮೌಲ್ಯದ 14 ಕೆ.ಜಿ 800 ಗ್ರಾಂ ತೂಕವಿರುವ 4 ಹಸಿ ಗಾಂಜಾ ಗಿಡಗಳು ಹಾಗೂ 2 ಒಣಗಿದ ಗಾಂಜಾ ಗಿಡಗಳನ್ನು ಬೇರು ಸಮೇತ ಕಿತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರ ಡಿ.ಸಿ.ಪಿ ಮುತ್ತುರಾಜು. ಎಂ. ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ ಎಂ.ಎನ್. ಶಶಿಧರ್ ರವರ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಇನ್ಸ್‌ ಪೆಕ್ಟರ್ ಪಿ.ಕೆ. ರಾಜು, ಪಿ.ಎಸ್.ಐ ಗಳಾದ ಸುನೀಲ್, ನಾಗರಾಜ ನಾಯಕ್‌ ಹಾಗೂ ಸಿಬ್ಬಂದಿಗಳಾದ ಸಿದ್ದಿಕ್ ಅಹಮದ್, ಆನಂದ್, ಶಾಜಿಯಾ, ಗೋಪಾಲ್, ಶಿವರಾಜಪ್ಪ, ಸಮೀರ್, ಸಂತೋಷ್, ವಿನೋದ್ ರಾಥೋಡ್, ಮಲ್ಲಿಕಾರ್ಜುನ ಚೌಗುಲೆ ರವರುಗಳು  ಮಾಡಿದ್ದಾರೆ.

Key words: Operation – Mysore- Police-Two drug -peddlers – arrest

website developers in mysore