ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸೇವಾ ಏಜೆನ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಬಿಬಿಎಂಪಿಯಿಂದ ಗಂಭೀರ ಲೋಪ.

ಡಿಸೆಂಬರ್ 26, 2022 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಷಿಕ ಪರಿಶೋಧನಾ ವರದಿಯಲ್ಲಿ ಗಮನಕ್ಕೆ ಬಂದಿರುವಂತೆ ಬಿಬಿಎಂಪಿಯ ಅಧಿಕಾರಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಸಿದ್ಧವಾಗುತ್ತಿರುವ ಪದವಿಪೂರ್ವ (ಪಿಯು) ವಿದ್ಯಾರ್ಥಿಗಳಿಗೆ ಹಾಗೂ ಟ್ಯಾಲಿ ಅಕೌಂಟಿಂಗ್ ಸಾಫ್ಟ್ವರ್ ಅನ್ನು ಕಲಿತು ತಮ್ಮ ಅಕೌಂಟೆನ್ಸಿ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ಉತ್ಸುಕರಾಗಿದ್ದಂತಹ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ತರಬೇತಿ ಏಜೆನ್ಸಿಯೊಂದನ್ನು ಆಯ್ಕೆ ಮಾಡುವಲ್ಲಿ ಅಗತ್ಯಕ್ಕಿಂತ ಹೆಚ್ಚು ವೇಗವನ್ನು ತೋರ್ಪಡಿಸಿರುವ ಸಂಗತಿ ಬಹಿರಂಗಗೊಂಡಿದೆ.

ಈ ಪರಿಶೊಧನಾ ವರದಿಯಲ್ಲಿ ಬಿಬಿಎಂಪಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಿಬಿಎಂಪಿ ಆಯ್ಕೆ ಮಾಡಿರುವ ಸೇವಾ ಏಜೆನ್ಸಿ ಆಯ್ಕೆ ಪ್ರಕ್ರಿಯೆಲ್ಲಿ ಗಂಭೀರ ಲೋಪವೊಂದು ಬಹಿರಂಗಗೊಂಡಿದೆ.

ಸಿಇಟಿ ಹಾಗೂ ಅಕೌಂಟಿಂಗ್ ಸಾಫ್ಟ್ ವೇರ್ ಟ್ಯಾಲಿಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಬಂಧಪಟ್ಟ ವಿಷಯದಲ್ಲಿ ಪರಿಣಿತಿಯನ್ನು ಹೊಂದಿರುವ ಸಂಸ್ಥೆಗಳನ್ನು ಗುರುತಿಸಿ ಆಯ್ಕೆ ಮಾಡುವ ಬದಲಿಗೆ, ಬಿಬಿಎಂಪಿಯು ಪೇಪರ್ ಪ್ಲೇಟುಗಳನ್ನು ತಯಾರಿಸಿ ವಿತರಣೆ ಮಾಡುವ ಎಸ್‌ ಆರ್ ಇಂಡಸ್ಟ್ರಿಸ್‌ಗೆ ಆ ಜವಾಬ್ದಾರಿಯನ್ನು ವಹಿಸಿರುವ ಸಂಗತಿ ಪರಿಶೋಧನಾ ವರದಿಯಲ್ಲಿ (ಪುಟ ಸಂಖ್ಯೆ ೧೯೪ ಹಾಗೂ ೧೯೫) ಕಂಡು ಬಂದಿದೆ. ಬಿಬಿಎಂಪಿಯು ೨೦೧೮ರಲ್ಲಿ ಸಿಇಟಿಗೆ ಸಿದ್ಧವಾಗುತ್ತಿರುವ 142 ವಿದ್ಯಾರ್ಥಿಗಳು ಹಾಗೂ ಟ್ಯಾಲಿ ತರಬೇತಿ ಪಡೆಯುವ 2,050 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಗುರುತಿಸಿ, ಆಯ್ಕೆ ಮಾಡಿರುವ ಈ ಎಸ್‌ ಆರ್ ಇಂಡಸ್ಟ್ರೀಸ್‌ ಗೆ ರೂ.೧,೮೪,೦೦,೦೦೦ ಪಾವತಿಸಿದೆ. ನಗರದಲ್ಲಿ ಬಿಬಿಎಂಪಿ ನಿರ್ವಹಿಸುತ್ತಿರುವ ೧೫ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ೨೦೧೮ರಲ್ಲಿ ಒಟ್ಟು ೪,೪೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆ ಪೈಕಿ ೧೪೨ ವಿದ್ಯಾರ್ಥಿಗಳು ಸಿಇಟಿ ತರಬೇತಿ ತರಗತಿಗಳಿಗೆ ಹಾಜರಾಗಲು ಆರ್ಹರಾಗಿದ್ದರು ಹಾಗೂ ೨,೦೫೦ ವಿದ್ಯಾರ್ಥಿಗಳು ಟ್ಯಾಲಿ ಸಾಫ್ಟ್ ವೇರ್ ಕಲಿಯಲು ಅರ್ಹತೆ ಪಡೆದುಕೊಂಡಿದ್ದರು.

ಜೊತೆಗೆ ಈ ಆಡಿಟ್‌ ನಲ್ಲಿ ಎಸ್‌ಆರ್ ಇಂಡಸ್ಟ್ರೀಸ್ ತರಬೇತಿ ನೀಡಲು ಗುತ್ತಿಗೆ ಪಡೆಯುವಾಗ, ಪಾಲಿಕೆಗೆ ಸಲ್ಲಿಸಿದ್ದಂತಹ ಅರ್ಜಿಯ ಜೊತೆಗೆ ಪರವಾನಗಿ ಪ್ರತಿಯನ್ನೂ ಲಗತ್ತಿಸಿಲ್ಲ. ಬಿಬಿಎಂಪಿಯು ಡಿಸೆಂಬರ್ ೧೧, ೨೦೧೮ರಲ್ಲಿ ಆದೇಶವೊಂದನ್ನು ಹೊರಡಿಸಿದ್ದು, ಸಿಇಟಿ ಹಾಗೂ ಟ್ಯಾಲಿ ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳ ಆಯ್ಕೆಯ ವಿಧಾನವನ್ನೂ ಹಾಗೂ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಕಲಿಯುತ್ತಿರುವ ಪಿಯು ಕಾಲೇಜುಗಳ ಹೆಸರಗಳನ್ನೂ ಸಹ ನಮೂದಿಸಿಲ್ಲ. ಈ ಸಂಬಂಧ ಪರಿಶೋಧನಾ ಅಧಿಕಾರಿಗಳು ಬಿಬಿಎಂಪಿ ಪ್ರಾಧಿಕಾರಿಗಳಿಗೆ ಡಿಸೆಂಬರ್ ೬, ೨೦೧೯ರಂದು ಒಂದು ಪತ್ರವನ್ನೂ ಬರೆದಿದ್ದು, ಆದರೆ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ, ಎಂದೂ ಬಿಬಿಎಂಪಿಯ ಮುಖ್ಯ ಪರಿಶೋಧನಾ ಅಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.

ಈ ವರದಿಯ ಪ್ರಕಾರ ಬಿಬಿಎಂಪಿ ಎಸ್.ಆರ್. ಇಂಡಸ್ಟ್ರೀಸ್‌ ಗೆ, ಸಿಇಟಿ ತರಬೇತಿಗೆ ಹಾಜರಾದ ಒಟ್ಟು ೧೪೨ ವಿದ್ಯಾರ್ಥಿಗಳಿಗೆ ತಲಾ ರೂ.೧೦,೪೭೫ರಂತೆ ರೂ.೧೦,೪೭೫ ಅನ್ನು ಟ್ಯೂಷನ್ ಶುಲ್ಕವನ್ನು ಪಾವತಿಸಿದೆ. ಅದೇ ರೀತಿ ಟ್ಯಾಲಿ ಸಾಫ್ಟ್ ವೇರ್ ತರಗತಿಗಳಿಗೆ ಹಾಜರಾದ ೨,೦೫೦ ವಿದ್ಯಾರ್ಥಿಗಳಿಗೆ ತಲಾ ರೂ.೮,೩೦೦ರಂತೆ ಟ್ಯೂಷನ್ ಶುಲ್ಕವನ್ನು ಅದೇ ಕಂಪನಿಗೆ ಪಾವತಿಸಿದೆ.

ಆದರೆ ತರಬೇತಿಯ ಅವಧಿ, ವಿದ್ಯಾರ್ಥಿಗಳ ಹಾಜರಾತಿ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿರುವ ಪ್ರಮಾಣಪತ್ರಗಳ ವಿವರಗಳು ಇವ್ಯಾವೂ ಲಭ್ಯವಿಲ್ಲ ಎಂದು ಆಡಿಟ್ ವರದಿ ಬಹಿರಂಗಗೊಳಿಸಿದೆ. ಸಿಇಟಿ ಇಸಿಟಿ ಹಾಗೂ ಟ್ಯಾಲಿ ಸಾಫ್ಟ್ ವೇರ್ ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು ಬಿಡ್‌ಗಳನ್ನು ಆಹ್ವಾನಿಸುವ ಟೆಂಟರ್‌ ಗಳಲ್ಲಿ ಉಲ್ಲಂಘನೆ ಆಗಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. “ಟೆಂಡರ್‌ ನಲ್ಲಿ ತರಬೇತಿ ತರಗತಿಗಳ ಅವಧಿಯ ವಿವರಗಳಿಲ್ಲ. ಟೆಂಡರ್ ಪ್ರಕ್ರಿಯೇಯೇ ಕಾನೂನುಬಾಹಿರ,” ಎಂದು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Serious lapse -BBMP – selection -process –service- agency – train- PU students