ಅಪರೇಷನ್ ಕಮಲ ಎಂಬ ಸಾಂಕ್ರಾಮಿಕ ರೋಗ ದೇಶ ನಾಶ ಮಾಡಿಸುವ ಮುನ್ನ ತೊಲಗಿಸಬೇಕಿದೆ-ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ ಕಿಡಿ…

Promotion

ಬೆಂಗಳೂರು, ಜು, 14,2019(www.justkannada.in):  ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಉಂಟಾಗಿದ್ದು,  ಇದಕ್ಕೆ ಕಾರಣ ಬಿಜೆಪಿಯೇ ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಕಾಂಗ್ರೆಸ್ ಟ್ವಟ್ಟರ್ ನಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದೆ.

ಕರ್ನಾಟಕ ಕಾಂಗ್ರೆಸ್  ಟ್ವೀಟ್ ಮಾಡಿದ್ದು ‘ಆಪರೇಷನ್ ಕಮಲ’ದ ಗುಡುಗಿದೆ.  ಅಪರೇಷನ್ ಕಮಲ ಎಂಬುದು@BJP4India ಎಂಬ ವೈರಸ್ ನಿಂದ ಹರಡುವ ಸಾಂಕ್ರಮಿಕ ರೋಗ.  ಅದು ದೇಶದಲ್ಲಿ ಹರಡುವ ಮುನ್ನ ತೊಲಗಿಸಬೇಕಿದೆ.  ಅಪರೇಷನ್ ಕಮಲ ಎಂಬ ರೋಗದಿಂದ ಪ್ರಜಾಪ್ರಭುತ್ವದಕ್ಕೆ ಧಕ್ಕೆಯಾಗಿದೆ ಎಂದು ವಾಗ್ದಾಳಿ ನಡೆಸಿದೆ.  ‘ಆಪರೇಷನ್ ಕಮಲ ಇದು ಅರುಣಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಹರಡಿ ಅಲ್ಲಿಂದ ಗೋವಾ, ಬಂಗಾಳಕ್ಕೂ ವಿಸ್ತರಿಸಿದೆ’ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ  ಹರಿಹಾಯ್ದಿದೆ.

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಆರೋಪವೇನು…?

‘ಆಪರೇಷನ್ ಕಮಲ ಎಂಬುದು @BJP4India ಎಂಬ ವೈರಸ್ ನಿಂದ ಹರಡಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಒಂದು ಗಂಭೀರವಾದ ಸಾಂಕ್ರಾಮಿಕ ರೋಗ. ಇದು ಅರುಣಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಹರಡಿ ಅಲ್ಲಿಂದ ಗೋವಾ, ಬಂಗಾಳಕ್ಕೂ ವಿಸ್ತರಿಸಿದೆ. ಈ ರೋಗವು ಪೂರ್ಣವಾಗಿ ವ್ಯಾಪಿಸಿ ಈ ದೇಶವನ್ನು ನಾಶ ಮಾಡುವ ಮುನ್ನ ಅದನ್ನು ತೊಲಗಿಸಲೇಬೇಕಿದೆ’ ಎಂದು ಟ್ವಿಟ್ ಮಾಡಿದೆ.

Key words: Operation Lotus – Infectious disease-Congress- sparks – BJP