ಚುನಾವಣಾಧಿಕಾರಿಗಳ ಕಾರ್ಯಾಚರಣೆ: ರಾಜ್ಯದಲ್ಲಿ ಈವರೆಗೆ 147 ಕೋಟಿ ರೂ. ನಗದು ಜಪ್ತಿ..

Promotion

ಬೆಂಗಳೂರು,ಮೇ,9,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮವನ್ನು ತಡೆಗಟ್ಟಲು ಚುನಾವಣಾಧಿಕಾರಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ.

ರಾಜ್ಯಾದ್ಯಂತ ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ  ದಾಳಿ ವೇಳೆ ಮತ್ತು ಚೆಕ್​ ಪೋಸ್ಟ್​ಗಳಲ್ಲಿ ಈವರೆಗೆ ಬರೋಬ್ಬರಿ 147 ಕೋಟಿ ರೂ. ಜಪ್ತಿಯಾಗಿದೆ. ಈವರೆಗೆ 375 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ.

ಇನ್ನು ಅಕ್ರಮವಾಗಿ ಹಣ ಸಂಗ್ರಹಿಸಿದ್ದ ನೂರಕ್ಕೂ ಅಧಿಕ ಕಡೆ ಐಟಿ ದಾಳಿ ನಡೆಸಿದ್ದು, ಬರೊಬ್ಬರಿ 42 ಕೋಟಿ ರೂ. ಹಣ ಸೀಜ್​ ಮಾಡಿದೆ. ವಿಜಿಲೆನ್ಸ್​, ಚೆಕ್​ ಪೋಸ್ಟ್​ಗಳಲ್ಲಿ ಬರೋಬ್ಬರಿ 105 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ. 96.59 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು, ಸೀರೆ, ಕುಕ್ಕರ್ ಸೇರಿ 24.21 ಕೋಟಿ ಮೌಲ್ಯದ ಹಲವು ಬಗೆಯ ವಸ್ತು, 83.33 ಕೋಟಿ ರೂ. ಮೌಲ್ಯದ 81.39 ಕೋಟಿ ಲೀಟರ್​ ಮದ್ಯ, 23 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಸೀಜ್​ ಮಾಡಲಾಗಿದೆ. ರಾಜ್ಯಾದ್ಯಂತ 2,896 ಎಫ್​ಐಆರ್​​ ದಾಖಲಾಗಿವೆ ಎಂದು ಮಾಹಿತಿ ನೀಡಿದೆ.

Key words: Operation – Election- Officers- 147 crore