ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್, ಎಲೆಕ್ಷನ್ ಬಳಿಕ ಬಿಜೆಪಿಯಿಂದ ಅಪರೇಷನ್- ಮಾಜಿ ಸಿಎಂ ಹೆಚ್.ಡಿಕೆ ಟೀಕೆ.

Promotion

ಯಾದಗಿರಿ,ಮಾರ್ಚ್,24,2023(www.justkannada.in): ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನವರು ಅಪರೇಷನ್ ಹಸ್ತ ಮಾಡಿದರೇ ಚುನಾವಣೆ ಬಳಿಕ ಬಿಜೆಪಿಯವರು ಅಪರೇಷನ್ ಕಮಲ ಮಾಡುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.

ಯಾದಗಿರಿ ಗುರುಮಠಕಲ್ ನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ನಾಯಕರ ವಲಸೆ ಪ್ರಾರಂಭವಾಗಿದೆ. ಕಾಂಗ್ರೆಸ್ ನಿಂದ ಅಪರೇಷನ್  ಹಸ್ತ ಬಿಜೆಪಿಯಿಂದ ಅಪರೇಷನ್ ಕಮಲ ಇದರ ಬಗ್ಗೆ ನಾನು ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಭವಿಷ್ಯ ಮುಗಿಸುತ್ತೇನೆಂದು ಬಾಬೂರಾವ್ ಚಿಂಚನಸೂರ್ ಹೇಳಿದ್ರು. ಆದರೆ ಈಗ ಚಿಂಚನಸೂರ್ ಅವರನ್ನೇ ಕಾಂಗ್ರೆಸ್ ನವರು ವಾಪಸ್ ಪಕ್ಷಕ್ಕೆ ಕರೆದುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಕೊರತೆ ಎಷ್ಟಿದೆ. ಅಂತಾ ಗೊತ್ತಾಗುತ್ತೆ. ಅವರ ಕುತ್ತಿಗೆ ಕುಯ್ದವರನ್ನೇ ಮತ್ತೆ ತಬ್ಬಿಕೊಂಡು ಹೊರಟಿದ್ದಾರೆ.  ಅಪರೇಷನ್ ಕಮಲ ಮಾಡುವ ಬಗ್ಗೆ ಬಿಜೆಪಿ ಸಂಖ್ಯೆ ತೆಗೆದು ನೋಡಿ ಅಪರೇಷನ್ ಮಾಡುವುದರಲ್ಲಿ ಬಿಜೆಪಿ ಗಿನ್ನಿಸ್ ದಾಖಲೆ ಮಾಡಬಹುದು ಎಂದು ವ್ಯಂಗ್ಯವಾಡಿದರು.

ಸಿದ್ಧರಾಮಯ್ಯ ಕ್ಷೇತ್ರ ಫೈನಲ್ ಆಗದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಬಗ್ಗೆ ಅನುಕಂಪ ಬೇಡ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮ ಅಭ್ಯರ್ಥಿ ವಿರುದ್ದ ಯಾರು ಸ್ಪರ್ಧಿಸ್ತಾರೆ ಎಂಬುದು ನನಗೆ ಬೇಡ. ನನಗೆ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು ಅಷ್ಟೆ. ಈ ಬಾರಿ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವುದಕ್ಕೆ ನನ್ನ ಹೋರಾಟ ಎಂದರು.

Key words: Operation – Congress –election- BJP – former CM H.D.Kumaraswamy