ದೇಶದಲ್ಲಿ ಮಾದಕ ವಸ್ತುಗಳ ಬಳಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬದ್ಧ-ಕೇಂದ್ರ ಗೃಹಸಚಿವ ಅಮಿತ್ ಶಾ.

ಬೆಂಗಳೂರು,ಮಾರ್ಚ್,24,2023(www.justkannada.in): ಹಿಂದಿನ ಸರ್ಕಾರಗಳು ದೇಶದಲ್ಲಿ ಮಾದಕ ವಸ್ತು ನಿಯಂತ್ರಿಸುವಲ್ಲಿ ವಿಫಲವಾಗಿದ್ದವು. ಆದರೆ ದೇಶದಲ್ಲಿ ಮಾದಕ ವಸ್ತುಗಳ ಬಳಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅಮಿತ್ ಶಾ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ದಕ್ಷಿಣ ಭಾರತದ ರಾಜ್ಯಗಳ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ,  ಮಾದಕ ವಸ್ತುಗಳ ನಿಯಂತ್ರಣ ಒಂದು ರೀತಿಯ ಸವಾಲಾಗಿತ್ತು. ಮಾದಕ ವಸ್ತುಗಳ ಮುಕ್ತ ಭಾರತಕ್ಕೆ ಮೋದಿ ಸರ್ಕಾರ ಪಣ ತೊಟ್ಟಿದೆ. ಮಾದಕ ವಸ್ತು ಮುಕ್ತ ಅಭಿಯಾನವನ್ನ ಕೇಂದ್ರ ಮಾಡುತ್ತಿದೆ ಎಂದರು.

ನಶೆ ಮುಕ್ತ ಭಾರತಕ್ಕೆ ಶ್ರಮಿಸಿದ್ದೇವೆ. ದೇಶದ ಭದ್ರತೆಗೆ ಎಲ್ಲಾ ಇಲಾಖೆಗಳು ಒಟ್ಟಾಗಿ ಶ್ರಮಿಸಬೇಕು.  ದಕ್ಷಿಣ ರಾಜ್ಯಗಳು ಡ್ರಗ್ಸ್ ತನಿಖೆ ಸ್ವರೂಪ ಬದಲಿಸಿಕೊಳ್ಳಬೇಕು.  ಡ್ರಗ್ಸ್ ಸರಬರಾಜು  ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ಎನ್ ಡಿಪಿಎಸ್ ಕಾನೂನು ಮತ್ತಷ್ಟು ಬಲಪಡಿಸಲಾಗುವುದು. ಸದ್ಯದ ದಿನಗಳಲ್ಲಿ ಕೇಂದ್ರದ ನೀತಿಯಿಂದ ಎಲ್ಲಾ ಬದಲಾಗಲಿದೆ ಎಂದು ಅಮಿತ್ ಶಾ ಹೇಳಿದರು.

Key words: central government – control-use – drugs – country-Union Home Minister- Amit Shah.