ಮೈಸೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲೇ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಜ್ಜು….

kannada t-shirts

ಮೈಸೂರು,ಜು,15,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಈ ಹಿನ್ನೆಲೆ ತಾಲ್ಲೂಕು  ಮಟ್ಟದಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.jk-logo-justkannada-logo

ಜಿಲ್ಲೆಯಲ್ಲಿ ಕೊರೋನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್  ತೆರೆಯಲು ಜಿಲ್ಲಾಡಳಿತ ಸಜ್ಜಾಗಿದ್ದು, ಈ ಕುರಿತು ಮೈಸೂರಿನ ಎಲ್ಲಾ ತಾಲ್ಲೂಕು ಆಡಳಿತಕ್ಕೆ  ಸೂಚನೆ ನೀಡಿದೆ.

ಕೋವಿಡ್ ಕೇರ್ ತೆರೆದ ನಂತರ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳಿಗೆ ಮಾತ್ರ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇನ್ಮುಂದೆ ಸೋಂಕಿತರಿಗೆ ತಾಲ್ಲೂಕು ಮಟ್ಟದಲ್ಲೇ ಚಿಕಿತ್ಸೆ ದೊರೆಯಲಿದೆ. ತಾಲ್ಲೂಕು ಮಟ್ಟದ ಕೋವಿಡ್ ಕೇರ್ ಸೆಂಟರ್ ಗಳು ಈ ರೀತಿ ಇವೆ.

ಎಚ್ ಡಿ ಕೋಟೆಯಲ್ಲಿ ಏಕಲವ್ಯ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್.

ಹುಣಸೂರರಿನಲ್ಲಿ ಸರ್ಕಾರಿ ಬಿಸಿಎಂ ಹಾಸ್ಟೆಲ್ ನಲ್ಲಿ 75 ಬೆಡ್ ವ್ಯವಸ್ಥೆ.

ಕೆ ಆರ್ ನಗರದಲ್ಲಿ ಆದರ್ಶ ವಿದ್ಯಾರ್ನಿಯರ ನಿಲಯದಲ್ಲಿ 60 ಬೆಡ್ ಗಳ ವ್ಯವಸ್ಥೆ.

ಪಿರಿಯಾಪಟ್ಟಣದಲ್ಲಿ  ಮೊರರ್ಜಿ ವಸತಿ ಶಾಲೆಯಲ್ಲಿ 80 ಬೆಡ್ ವ್ಯವಸ್ಥೆ.open-covid-care-center-taluk-centers-mysore-district

ನರಸೀಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 50 ಬೆಡ್ ಗಳ ವ್ಯವಸ್ಥೆ.

ನಂಜನಗೂಡಿನಲ್ಲಿ ಮೊರರ್ಜಿ ದೇಸಾಯಿ ಶಾಲೆ ಮಹದೇವನಗರದಲ್ಲಿ 79 ಬೆಡ್ ವ್ಯವಸ್ಥೆಗಳನ್ನ ಆಯಾ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿಕೊಂಡಿದೆ.  ಕೊರೋನಾ ಸೋಂಕಿ ಪ್ರಮಾಣ ಹೆಚ್ಚಳವಾಗುತ್ತಿರುವಂತೆ ಬೆಡ್ ನ ಕೊರತೆ ಕಂಡು ಬರುತ್ತದೆ.

Key words:  open- covid Care Center – taluk centers –Mysore- district.

 

website developers in mysore