ತಪ್ಪು ಮಾಡಿರುವ ಪಿಡಿಓಗಳನ್ನಷ್ಟೇ ರಾಕ್ಷಸ ಪ್ರವೃತ್ತಿಯವರು ಎಂದಿದ್ದೇನೆ  : ಸಚಿವ ವಿ.ಸೋಮಣ್ಣ ಸ್ಪಷ್ಟ

Promotion

ಬೆಂಗಳೂರು,ಸೆಪ್ಟೆಂಬರ್,13,2020(www.justkannada.in) : ತಪ್ಪು ಮಾಡಿರುವಂತಹ ಪಿಡಿಓಗಳನ್ನುದ್ದೇಶಿಸಿ ಕೆಲವು ಪಿಡಿಓಗಳು ರಾಕ್ಷಸ ಪ್ರವೃತ್ತಿ ಯವರು ಇದ್ದಾರೆ ಎಂದು ಹೇಳಿದ್ದೇನೆ ಹೊರತು ಇನ್ಯಾರನ್ನು ಉದ್ದೇಶಿಸಿ ಅಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

jk-logo-justkannada-logo

ಬಹಳ ವರುಷಗಳಿಂದ ಮನೆಗಾಗಿ  ಕಾಯುತ್ತಿರುವ ಬಡವರಿಗಾಗಿ ಮನೆಗಳನ್ನು ಕೊಡಬೇಕೆಂಬ ಉದ್ದೇಶದಿಂದ ಜಿಲ್ಲಾವಾರು ಸಭೆಗಳನ್ನು ನಡೆಸಲಾಗುತ್ತಿದೆ. ನೆನ್ನೆ ಹಾಸನದಲ್ಲಿ ಸಭೆ ನಡೆಸುವ ವೇಳೆಯಲ್ಲಿ  ಕೆಲವು ಪಿ.ಡಿ.ಓ ಗಳ ಕಾರ್ಯವೈಖರಿಯನ್ನು ಖಂಡಿಸಿ ಮಾತನಾಡುತ್ತ ಕೆಲವರನ್ನ ರಾಕ್ಷಸ ಪ್ರವೃತ್ತಿ ಯವರು ಇದ್ದಾರೆ ಎಂದು ಹೇಳಿದ್ದೇನೆ ಹೊರತು ಇನ್ಯಾರನ್ನು ಉದ್ದೇಶಿಸಿ ಮಾತನಾಡಿಲ್ಲ ತಪ್ಪನ್ನ ಮಾಡಿದವರಿಗೆ ಮಾತ್ರ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇಲ್ಲಿಯವರೆಗೂ 1.200 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದ್ದೇವೆ. ಶಾಸಕರಾದ ಎಚ್.ಡಿ ರೇವಣ್ಣ .ಏ.ಟಿ‌ ರಾಮಸ್ವಾಮಿ.ಶಿವಲಿಂಗಗೌಡರು ಸಭೆಯಲ್ಲಿ ಪಿ.ಡಿ ಓ ಗಳ ಕಾರ್ಯವೈಖರಿ ಬಗ್ಗೆ ಪ್ರಸ್ತಾಪ ಮಾಡಿದ ಕಾರಣ ನಾನು ಆ ಪದವನ್ನ ಬಳಸಿದ್ದೇನೆ ಹೊರತು ಬೇರೆ ಯಾವ ಉದ್ದೇಶವಿಲ್ಲ ಎಂದರು.

Only-PDOs-made-mistake-rogue-tendency-Minister V. Somanna-clear

ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೇ ವಿಷಾದ ವ್ಯಕ್ತಪಡಿಸುವೆ

ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೇ ವಿಷಾದ ವ್ಯಕ್ತಪಡಿಸುತ್ತೇನೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅನುದಾನ ನೀಡಲು ಮೂರನೇ ವ್ಯಕ್ತಿ ಮೂಲಕ ವರದಿ ತರಿಸುವೆ

ಚಿತ್ರದುರ್ಗ.ರಾಯಚೂರು ಜಿಲ್ಲೆ ಸೇರಿದಂತೆ ಹಲವಡೆ ಅನರ್ಹರಿಗೆ ಅನುದಾನ ಮಂಜೂರಾಗಿದೆ. ಅದನ್ನ ಪತ್ತೆ ಹಚ್ಚಿದ್ದೇನೆ. ಇನ್ನು ಮುಂದೆ ಅನುದಾನ ಕೊಡುವಾಗ ಮೂರನೇ ವ್ಯಕ್ತಿ ಮುಖಾಂತರ ವರದಿ ತರಿಸಿಕೊಳ್ಳುತ್ತೇನೆ. ಯಡಿಯೂರಪ್ಪ ಇಂತಹ ವಿಷಮ ಪರಿಸ್ಥಿತಿಯಲ್ಲು 10 ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ.ಎಂದು ತಿಳಿಸಿದರು.

key words : Only-PDOs-made-mistake-rogue-tendency-Minister V. Somanna-clear