ಶ್ರೀಮಂತರಿಗೆ ಮಾತ್ರ ಸಹಾಯ ಮಾಡ್ತಾರೆ- ಕೊಡಗಿನಲ್ಲಿ ಶಾಸಕರ ಅಪ್ಪಚ್ಚು ರಂಜನ್ ವಿರುದ್ದ ಸ್ಥಳೀಯರ ಆಕ್ರೋಶ..

Promotion

ಕೊಡಗು,ಆ,11,2019(www.justkannada.in): ಭಾರಿ ಮಳೆಯಿಂದಾಗಿ ನೆರೆಯಿಂದಾಗಿ ಮನೆಗಳು ಕುಸಿದ ವೇಳೆ ಜನರ ರಕ್ಷಣೆಗೆ ಬರಲಿಲ್ಲವೆಂದು ಆರೋಪಿಸಿ ಕೊಡಗಿನಲ್ಲಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಗುಡ್ಡೆಹೊಸರು ಸಮೀಪದ ತೆಪ್ಪದಕಂಡಿಯಲ್ಲಿ ಗ್ರಾಮಸ್ಥರು ಶಾಸಕರ ಅಪ್ಪಚ್ಚು ರಂಜನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಿನ್ನೆಯ ದಿನ ಕಾವೇರಿ ನೀರಿನ ರಭಸಕ್ಕೆ 4 ಮನೆಗಳು ಕುಸಿದು ಬಿದ್ದಿದ್ದವು. ಈ ಸಮಯದಲ್ಲಿ ಗ್ರಾಮಸ್ಥರು ಸ್ವತಹ ತಾವೇ ಮನೆಗಳ ಸಾಮಾನುಗಳನ್ನು ತೆರವು ಮಾಡಿದ್ದರು.

ಆದರೆ ಇಂದು ಎರಡು ಜೀಪ್ ನಲ್ಲಿ ಅಪ್ಪಚ್ಚು ರಂಜನ್ ಹಾಗೂ ಬೆಂಬಲಿಗರ  ಕಾರಿನಲ್ಲಿ ಬೆಂಬಲಿಗರು ಬಂದಿದ್ದರು. ಈ ವೇಳೆ ಅಪ್ಪಚ್ಚು ರಂಜನ್ ಹಾಗೂ  ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ಇವರು ಶ್ರೀಮಂತರಿಗೆ ಮಾತ್ರ ಸಹಾಯ ಮಾಡ್ತಾರೆ. ಪೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ ಎಂದು ಕಿಡಿಕಾರಿದರು.

ಮನೆಗಳು ಬಿದ್ದರೂ ಆವಾಗ ಜನರ ರಕ್ಷಣೆಗೆ ಬರದಂತಹ ನೀವು ಈಗ ಏಕೆ ಬಂದಿದ್ದು ಎಂದು ಶಾಸಕರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡು, ಶಾಸಕರ ಅಪ್ಪಚ್ಚು ರಂಜನ್ ವಿರುದ್ಧ ಘೋಷಣೆ ಕೂಗಿ ತೆಪ್ಪದಕಂಡಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಶಾಸಕರ ಬೆಂಬಲಿಗರು ಕ್ಷೀಪ್ರ ಕಾರ್ಯಚರಣೆ ತಂಡ ಕಟ್ಟಿಕೊಂಡು ಸಹಾಯ ಮಾಡುತ್ತಿದ್ದಾರೆ.

Key words: Only – rich- help-Local –outrage- against –MLA-appacchu ranjan