ದುಬೈನಿಂದ ಬಂದಿದ್ದ ಮೈಸೂರಿನ ವ್ಯಕ್ತಿಗೆ ಕೊರೋನಾ ಸೋಂಕು: ಎರಡಕ್ಕೇರಿದ ಸೋಂಕಿತರ ಸಂಖ್ಯೆ

Promotion

ಮೈಸೂರು, ಮಾರ್ಚ್ 23, 2020 (www.justkannada.in): ಮೈಸೂರಿನಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ದುಬೈನಿಂದ ಮೈಸೂರಿಗೆ ಬಂದಿದ್ದ 46ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತನಿಗೆ ನಗರದ ಕೆಆರ್ ಆಸ್ಪತ್ರೆಯಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಎರಡಕ್ಕೆ ಏರಿದೆ.

ಸದ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ ಬೆಂಗಳೂರಿನಲ್ಲಿ 17, ಕಲ್ಬುರ್ಗಿ 3, ಕೊಡಗು 1, ಚಿಕ್ಕಬಳ್ಳಾಪುರ 2, ಮೈಸೂರು 2, ಧಾರವಾಡ 1, ಉತ್ತರ ಕನ್ನಡ 1 ಪ್ರಕರಣಗಳು ದಾಖಲಾಗಿವೆ.

ಸೋಮವಾರವೂ  ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಕರ್ನಾಟಕದಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆ ಆಗಿದೆ.