‘ರೈತರೊಂದಿಗೆ ಒಂದು ದಿನ ವಿಶೇಷ ಕಾರ್ಯಕ್ರಮ’: ರಾಗಿ, ಕಬ್ಬು ಬಿತ್ತನೆ ಮಾಡಿ ಗಮನ ಸೆಳೆದ ಕೃಷಿ ಸಚಿವ ಬಿಸಿ ಪಾಟೀಲ್…

ಮಂಡ್ಯ,ನವೆಂಬರ್,14,2020(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ಆದರೆ ನಾನು ಅದನ್ನ ಕಾಪಿ ಮಾಡಲ್ಲ. ರೈತರೊಂದಿಗೆ ಇದ್ದು ವಾಸ್ತವತೆ ಅರಿಯುತ್ತೇನೆ. ರೈತರ ಸಮಸ್ಯೆ ಆಲಿಸುತ್ತೇನೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.One day -special program –with- farmers-Agriculture Minister-BC  Patil-mandya

ಮಂಡ್ಯ ಜಿಲ್ಲೆ ಹೊಸಕೋಟೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ, ಕಬ್ಬು ರಾಗಿ ಬಿತ್ತನೆ ಮಾಡುವ ಮೂಲಕ ‘ರೈತರೊಂದಿಗೆ ಒಂದು ದಿನ’ ವಿಶೇಷ ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಚಾಲನೆ ನೀಡಿದರು. ತಮ್ಮ ಹುಟ್ಟಹಬ್ಬದ ದಿನದಂದೇ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಕುರಿತು ಮಾತನಾಡಿದ ಸಚಿವ ಬಿ.ಸಿ ಪಾಟೀಲ್,  ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ಅವರು ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು.ಆದರೆ ನಾನು ವಾಸ್ತವತೆಯನ್ನು ಅರಿಯುತ್ತಿದ್ದೇನೆ. ನಾನು ಅವರನ್ನು ಕಾಪಿ ಮಾಡುತ್ತಿಲ್ಲ. ನಾನು ಬೆಳಗ್ಗಿಯಿಂದ ರಾತ್ರಿವರೆಗೂ ಇದ್ದು ವಾಸ್ತವತೆ ಅರಿಯುತ್ತಿದ್ದೇನೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸುತ್ತೇವೆ ಎಂದು ನುಡಿದರು.One day -special program –with- farmers-Agriculture Minister-BC  Patil-mandya

ನಾವು ಮಾಡುವ ಕಾರ್ಯಕ್ರಮದಿಂದ ರೈತರ ಸಮಸ್ಯೆ ತಿಳಿಯುತ್ತದೆ. ತಿಂಗಳಿಗೆ ಮೂರು ದಿನ ಈ ಕಾರ್ಯಕ್ರಮ ಮಾಡುತ್ತೇನೆ. ಇನ್ನು ಎಲ್ಲಾ ಜಿಲ್ಲೆಗಳನ್ನ ಸುತ್ತಿದ ಬಳಿಕ ರೈತರ ಸಮಸ್ಯೆ ಬಗ್ಗೆ ಸಿಎಂಗೆ ವರದಿ ನೀಡುತ್ತೇನೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.

English summary…

Agriculture Minister’s day with famrers
Mandya, Nov. 14, 2020 (www.justkannada.in): Agriculture Minister B.C. Patil who is celebrating his birthday today inaugurated a special programme ‘A day with farmers’, by working with the farmers in the field.
Speaking about this unique programme he expressed his view that he is not copying former CM HDKs ‘Grama Vastavya’ and instead attempting to understand the life and problems faced by the farmers by staying with them for an entire day. He said that this programme would be held three days in a month and he would visit every district and address the problems of the farmers and finally submit a report to the Chief Minister.One day -special program –with- farmers-Agriculture Minister-BC  Patil-mandya

Key words: One day -special program –with- farmers-Agriculture Minister-BC  Patil-mandya