ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ

ಮೈಸೂರು,ನವೆಂಬರ್,14,2020(www.justkannada.in) : ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು. ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ತರಗತಿಗೆ ಹಾಜರಾಗುವ ಅವಕಾಶ ಇರುತ್ತದೆ ಎಂದು ಮೈಸೂರು ವಿವಿಯ ಕುಲಸಚಿವ ಆರ್.ಶಿವಪ್ಪ ತಿಳಿಸಿದ್ದಾರೆ.kannada-journalist-media-fourth-estate-under-loss

ನವೆಂಬರ್ 17ರಿಂದ ಸರ್ಕಾರದ ಆದೇಶದಂತೆ ತರಗತಿಗಳು ಆರಂಭ

ನವೆಂಬರ್ 17ರಿಂದ ಸರ್ಕಾರದ ಆದೇಶದಂತೆ ಮೈಸೂರು ವಿವಿ ವ್ಯಾಪ್ತಿಯಲ್ಲಿ ಬರುವ 231 ಡಿಗ್ರಿ ಕಾಲೇಜುಗಳಲ್ಲಿ ಅಂತಿಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿವೆ. ತರಗತಿಗೆ ಬರುವ ಮುನ್ನ ಕೋವಿಡ್ ಟೆಸ್ಟ್ ವರದಿ ತರಬೇಕು. ನೆಗೆಟಿವ್ ಇದ್ದರೆ ಮಾತ್ರ ತರಗತಿಗೆ ಪ್ರವೇಶವಿದ್ದು, ಇದರ ಜೊತೆಗೆ ತಂದೆ-ತಾಯಿಗಳಿಂದ ಒಪ್ಪಿಗೆ ಪತ್ರವನ್ನು ಸಹ ತರಬೇಕು. ಈ ಬಗ್ಗೆ ಈಗಾಗಲೇ ಕಾಲೇಜಿನ ಪ್ರಾಂಶುಪಾಲರನ್ನು ಕರೆಸಿ ತಿಳಿಸಲಾಗಿದೆ ಎಂದರು.

ವಿವಿ ವ್ಯಾಪ್ತಿಯಲ್ಲಿ ಬರುವ 4 ಸ್ನಾತಕೋತ್ತರ ಕೇಂದ್ರಗಳು ಹಾಗೂ 40 ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ‌ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸಹ ಕೋವಿಡ್ ಟೆಸ್ಟ್​ಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

ತರಗತಿಗೆ ಬರಲು ಕಡ್ಡಾಯ ಆದೇಶವಿಲ್ಲ

ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಕಡ್ಡಾಯ ಆದೇಶ ಇಲ್ಲ ಎಂದ ಅವರು, ಪ್ರಥಮ, ದ್ವೀತಿಯ ಪದವಿ ತರಗತಿಗೆ ಆನ್​ಲೈನ್ ಮೂಲಕ ತರಗತಿ ಆರಂಭವಾಗಲಿದೆ. ಸರ್ಕಾರದ ಮಾರ್ಗಸೂಚಿ ಹಿನ್ನೆಲೆ ಈ ರೀತಿ ತರಗತಿ ಪ್ರಾರಂಭವಾಗಿದೆ. ಈ ಕುರಿತು ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.Covid-test-compulsory-students-R.Shivappa-Vice Chancellor-Mysore

English summary….

COVID-19 test for students’ compulsory: MU Registrar R. Shivappa
Mysuru, Nov. 14, 2020 (www.justkannada.in): Following orders issued by the government to commence degree classes from November 17, Mysore University Registrar R. Shivappa has informed that the students should compulsorily undergo COVID-19 test and they will be allowed to attend the classes only if they get negative report.
He also has informed that online classes will be commenced for the first and second year degree students, as per the government guidelines. The University has taken all precautionary measures.Covid-test-compulsory-students-R.Shivappa-Vice Chancellor-Mysore

key words : Covid-test-compulsory-students-R.Shivappa-Vice Chancellor-Mysore