ಹಳೇ ಸಂಸತ್ ಭವನಕ್ಕೆ ವಿದಾಯ: ಫೋಟೊ ಶೂಟ್ ನಲ್ಲಿ ಪ್ರಧಾನಿ ಮೋದಿ ಸೇರಿ ಎಲ್ಲಾ ಸಂಸದರು ಭಾಗಿ.

Promotion

ನವದೆಹಲಿ,ಸೆಪ್ಟಂಬರ್,19,2023(www.justkannada.in):  ಇಂದು ಹಳೇ ಸಂಸತ್​​​​ನಿಂದ ಹೊಸ ಸಂಸತ್ ಭವನಕ್ಕೆ ಕಲಾಪ ಶಿಫ್ಟ್​​​ ಆಗಲಿದೆ.ಈ ಹಿನ್ನೆಲೆಯಲ್ಲಿ ಇಂದು ಹಳೇ ಸಂಸತ್ ಭವನದ ಎದುರು ಫೋಟೋಶೂಟ್ ನಡೆಯಿತು.

ಇಂದು ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳಲಿದ್ದು, ಹೊಸ ಸಂಸತ್ ಭವನದಲ್ಲಿ ಮಧ್ಯಾಹ್ನ ಕಲಾಪ ಆರಂಭವಾಗಲಿದೆ. ಲೋಕಸಭೆಯಲ್ಲಿ ಮಧ್ಯಾಹ್ನ 1.15ಕ್ಕೆ ವಿಶೇಷ ಅಧಿವೇಶನ ಕಲಾಪ ಆರಂಭ. ರಾಜ್ಯಸಭೆಯಲ್ಲಿ ಮಧ್ಯಾಹ್ನ 2:15ಕ್ಕೆ ಕಲಾಪ ಆರಂಭವಾಗಲಿದೆ.

ಈ ಹಿನ್ನೆಯಲ್ಲಿ ಇಂದು ಹಳೇ ಸಂಸತ್ ಭವನದ ಎದುರು ಸಂಸದರ ಫೋಟೊ ಶೂಟ್ ನೆಯಿತು.  ಫೋಟೋಶೂಟ್ ನಲ್ಲಿ  ಪ್ರಧಾನಿ ಮೋದಿ, ಸ್ಪೀಕರ್ ಓಂ ಬಿರ್ಲಾ  ಉಪರಾಷ್ಟ್ರಪತಿ ಜಗದೀಪ್ ಧನಕರ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲಾ ಸಂಸದರು ರಾಜ್ಯಸಭೆ ಸದಸ್ಯರು ಭಾಗಿಯಾಗಿದ್ದರು.

Key words:  Old Parliament House-All MPs – PM-Modi – photo shoot.