ಮುನ್ನೆಚ್ಚರಿಕೆ ವಹಿಸಿ ಆಫ್‌ಲೈನ್‌ ಕ್ಲಾಸ್;‌ ತುಮಕೂರು ವಿವಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಎಂ ಅಶ್ವಥ್ ನಾರಾಯಣ್..

ತುಮಕೂರು,ನವೆಂಬರ್,23,2020(www.justkannada.in): ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ಬಂದ್‌ ಆಗಿದ್ದ ಪದವಿ ಕಾಲೇಜುಗಳ ಆಫ್‌ಲೈನ್‌ ತರಗತಿಗಳು ಪುನಾರಂಭವಾಗಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತುಮಕೂರಿನ ವಿಶ್ವವಿದ್ಯಾಲಯದ ಕನ್ಸುಟುಯೆಂಟ್ ಪದವಿ ಕಾಲೇಜಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಬೆಳಗ್ಗೆಯೇ ವಿವಿ ಕುಲಪತಿ ಪ್ರೊ.ಸಿದ್ದೇಗೌಡ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಕಾನ್ಸ್‌ಟಿಯಂಟ್‌ ಡಿಗ್ರಿ ಕಾಲೇಜಿಗೆ ಭೇಟಿ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೋವಿಡ್‌ ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಮುನ್ನಚ್ಚೆರಿಕೆ ಕ್ರಮಗಳನ್ನು ಪರಿಶೀಲನೆ ಮಾಡಿದರಲ್ಲದೆ; ವಿದ್ಯಾರ್ಥಿಗಳ ದೈಹಿಕ ಅಂತರ, ಮಾಸ್ಕ್‌ ಧರಿಸುವುದು, ಸ್ಯಾನಿಟೈಸೇಷನ್‌, ಕೊಠಡಿಗಳ ಸ್ವಚ್ಛತೆ ಇತ್ಯಾದಿ ಅಂಶಗಳನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದರು.

ತರಗತಿಗಳು ನಡೆಯುತ್ತಿದ್ದ ಕೊಠಡಿಗಳಿಗೂ ಭೇಟಿ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್,  ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರಲ್ಲದೆ, ಅವರ ಕುಂದುಕೊರತೆಗಳನ್ನು ವಿಚಾರಿಸಿದರು. ಕಾಲೇಜಿನಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆಯಾ? ಇಲ್ಲವಾ? ಎಂದು ಮಾಹಿತಿ ಪಡೆದುಕೊಂಡರು. ಮುಖ್ಯವಾಗಿ ತರಗತಿ ಕೊಠಡಿಗಳ ಸ್ವಚ್ಛತೆಯನ್ನು ತೀವ್ರವಾಗಿ ಪರಿಶೀಲಿಸಿದರು.offline-class-dcm-ashwath-narayan-visited-tumkur-university-college

ಆನ್‌ಲೈನ್‌ ಕ್ಲಾಸ್‌ ನಮಗೆ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ನಾನು ಆಫ್‌ಲೈನ್‌ ಕಾಲೇಜಿಗೆ ಹಾಜರಾಗುತ್ತಿದ್ದೇನೆ. ಈಗ ಪಾಠಗಳು ತುಂಬಾ ಚೆನ್ನಾಗಿ ಅರ್ಥವಾಗುತ್ತಿವೆ ಎಂದು ಶಿರಾ ಮೂಲದ ವಿದ್ಯಾರ್ಥಿನಿಯೊಬ್ಬರು ಡಿಸಿಎಂ ಅಶ್ವಥ್ ನಾರಾಯಣ್ ಗಮನಕ್ಕೆ ತಂದರು.

ಸರಕಾರ ಮುನ್ನೆಚ್ಚರಿಕೆ ವಹಿಸಿದೆ:

ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಪದವಿ, ಸ್ನಾತಕೋತ್ತರ, ಡಿಪ್ಲೊಮೋ ತರಗತಿಗಳ ಅಂತಿಮ ವರ್ಷದ ಆಫ್‌ಲೈನ್‌ ತರಗತಿಗಳು ಕಳೆದ ನ. 17ರಿಂದ ಆರಂಭವಾಗಿವೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೋಷಕರೂ ಸಹಕಾರ ನೀಡುತ್ತಿದ್ದಾರೆ. ಜ್ಞಾನಾರ್ಜನೆ ಬಗ್ಗೆ ಮಕ್ಕಳಿಗಿರುವ ಆಸಕ್ತಿ ನನಗೆ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.

ಕೆಲ ರಾಜ್ಯಗಳಲ್ಲಿ ಕೋವಿಡ್‌ ಹಾವಳಿ ಉಲ್ಬಣಿಸುತ್ತಿದೆ. ಅಲ್ಲೆಲ್ಲ ತರಗತಿಗಳನ್ನು ನಡೆಸುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್,  ಸವಾಲು ಇದೆ ಎಂದು ಕೈಚೆಲ್ಲಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷ ಸ್ಥಗಿತವಾಗಬಾರದು. ಅದರಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಭವಿಷ್ಯದ ಪ್ರಶ್ನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಆಫ್‌ ಲೈನ್‌ ತರಗತಿಗಳನ್ನು ಆರಂಭ ಮಾಡಿದ್ದೇವೆ ಎಂದರು.

ಆರಂಭದಲ್ಲಿ ಕಡಿಮೆ ವಿದ್ಯಾರ್ಥಿಗಳು ನೇರ ತರಗತಿಗಳಿಗೆ ಹಾಜರಾಗುತ್ತಿದ್ದರು. ಈಗ ದಿನೇದಿನೇ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉತ್ಸಾಹ ಬರುತ್ತಿದೆ. ಈಗ ಕೋವಿಡ್‌ ನಡುವೆಯೂ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಇನ್ನು ಕಾಲೇಜಿಗೆ ಬರುವುಧಕ್ಕೂ ಮೊದಲು ಮಾಡಿಸಿದ ಪರೀಕ್ಷೆಯಲ್ಲಿ 130 ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟೀವ್‌ ಬಂದಿದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ತರಗತಿಗೆ ಬರುವ ಮೊದಲೇ ಅವರಿಗೆ ಕೋವಿಡ್‌ ಇತ್ತು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ರಿಪೋರ್ಟ್‌ ಬೇಗ ಬರುತ್ತೆ:

ವಿದ್ಯಾರ್ಥಿಗಳು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡ ಮೇಲೆ ಅವರ ವರದಿಗಳು ಬೇಗ ಬರುವಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. 48 ಗಂಟೆಗಳಲ್ಲ, 24 ಗಂಟೆಗಳಲ್ಲೇ ವರದಿ ಬರುವಂತೆ ಕ್ರಮ ವಹಿಸಲಾಗುವುದು. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಟೆಸ್ಟ್‌ ಮಾಡಲಾಗುತ್ತಿದೆ, ದಿನಕ್ಕೆ 75 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ ಎಂದು  ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

english summary…

DCM Ashwathnarayan visits Tumakuru University Constituent College
Tumakuru, Nov. 23, 2020 (www.justkannada.in): Following the reopening of degree colleges after a gap of 8 months, Deputy Chief Minister and Higher Education Minister Dr. C.N. Ashwathnarayan visited the Constituent Degree College of Tumakuru University on Monday and inspected.
He visited the college along with Prof. Siddegowda, Chancellor of Tumakuru University and other senior officials of the department and inspected the precautionary measures taken to prevent Corona pandemic in the College.offline-class-dcm-ashwath-narayan-visited-tumkur-university-college
In his response to the press persons question on increasing number of corona cases and decision not to commence colleges in few states, he opined that we should not keep quite because we are facing challenges. “It is the question of students future. There studies should not stop, especially students who are pursuing final year graduation. We have taken all precautions and also we have commenced offline classes keeping in mind their safety.”
Key words: offline -class-DCM -Ashwath Narayan –visited- Tumkur university -College.

Key words: offline -class-DCM -Ashwath Narayan –visited- Tumkur university -College.