‘ಒಡೆಯ’ ಬಿಡುಗಡೆ: ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಹೆಚ್ಚಳ

Promotion

ಬೆಂಗಳೂರು, ಡಿಸೆಂಬರ್ 05, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ಒಡೆಯಾ ಚಿತ್ರದ ಟೀಸರ್, ಟ್ರೈಲರ್ ಭರ್ಜರಿಯಾಗಿ ಸದ್ದು ಮಾಡಿದೆ.

ಇದೇ ಲೆಕ್ಕಾಚಾರದಲ್ಲಿ ಸಿನಿಮಾ ಕೂಡಾ ಒಳ್ಳೆಯ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಚಿತ್ರತಂಡಕ್ಕಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಇದೆ. ಡಿಸೆಂಬರ್ 12 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಸುಮಾರು 700 ಥಿಯೇಟರ್ ಗಳಲ್ಲಿ ಒಡೆಯನ ದರ್ಶನವಾಗಲಿದೆ.