ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಚೀಲಗಳು ಕುಸಿದು ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ.

Promotion

ವಿಜಯಪುರ, ಡಿಸೆಂಬರ್ ​,5,2023(www.justkannada.in): ವಿಜಯಪುರದ ಹೊರವಲಯದಲ್ಲಿನ ರಾಜಗುರು ಫುಡ್ಸ್‌  ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ​ಮೂಟೆಗಳು  ಕುಸಿತು ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ 8 ಮಂದಿ ಸಿಲುಕಿದ್ದರು. ಅದರಲ್ಲಿ ಒಬ್ಬರನ್ನು ನಿನ್ನೆ ರಕ್ಷಿಸಲಾಗಿದೆ. ಆದರೆ 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಏಳು ಮಂದಿ ಶವವನ್ನು ಹೊರಕ್ಕೆ ತರಲಾಗಿದೆ.

ಬಿಹಾರ ಮೂಲದ ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ (29) ಸಂಬೂ ಮುಖಿಯಾ (26), ರಾಮ್ ಬಾಲಕ್ (52) ಲುಖೋ ಜಾಧವ್ (45) ಮೃತ ಕಾರ್ಮಿಕರು. ಸೋನುಕುಮಾರ್ ಎಂಬುವುರನ್ನು ರಕ್ಷಿಸಲಾಗಿದೆ.

ನಿನ್ನೆ ರಾತ್ರಿ ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿಯ  ರಾಜಗುರು ಫುಡ್ಸ್‌ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಸುಮಾರು 200 ಟನ್​ ಮೆಕ್ಕೆಜೋಳ ಕುಸಿದಿತ್ತು. ಇದರಿಂದ ಮೆಕ್ಕೆಜೋಳ ರಾಶಿಯೊಳಗೆ  ಸಿಲುಕಿ 7 ಮಂದಿ ಮೃತಪಟ್ಟಿದ್ದಾರೆ.

Key words: number of dead – increased  7 – collapsing – maize- processing- plant.