ಮುಸ್ಲೀಮರಿಗೆ ಅನ್ಯಾಯವಾಗಲು ಬಿಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ  ಆರ್. ಅಶೋಕ್ ಕಿಡಿ.

0
2

ಬೆಳಗಾವಿ,ಡಿಸೆಂಬರ್,5,2023(www.justkannada.in): ಮುಸ್ಲೀಮರಿಗೆ ದೇಶದ ಸಂಪತ್ತು ಹಂಚುತ್ತೇನೆ. ಮುಸ್ಲೀಮರಿಗೆ ಅನ್ಯಾಯವಾಗಲು ಬಿಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ  ಆರ್.ಅಶೋಕ್, ಸಿದ್ದರಾಮಯ್ಯರಿಂದ ಮುಸ್ಲೀಮರ  ಒಲೈಕೆ ಸರಿಯಲ್ಲ. ಸಿದ್ದರಾಮಯ್ಯ ಹಿಂದೂಗಳನ್ನ  2ನೇ ದರ್ಜೆ ರೀತಿ ನೋಡುತ್ತಿದ್ದಾರೆ. ಟಿಪ್ಪು ಅಂದ್ರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಸಿಎಂ ಸಿದ್ದರಾಮಯ್ಯ ಆಡಿದ ಮಾತು ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಿಂದೆ ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಏನಾಯಿತು? ಎಂದು ವಾಗ್ದಾಳಿ ನಡೆಸಿದರು.

ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾಯಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ನಂತರ ಚುನಾವಣೆಯಲ್ಲಿ ಸೋತರು. ಈಗ ಮತ್ತ ಅಧಿಕಾರಕ್ಕೆ ಬಂದಿದ್ದಾರೆ.  ಮತ್ತೆ ಮುಸ್ಲೀಮರ ಒಲೈಕೆ ಶುರು ಮಾಡಿದ್ದಾರೆ. ಮುಸ್ಲೀಂ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರ್ ಅಶೋಕ್  ಹರಿಹಾಯ್ದರು.

Key words:  CM Siddaramaiah- statement -injustice -not – Muslims-oppostion leader- R. Ashok