ಜನಪರ ಕಾಳಜಿ ಇಟ್ಟುಕೊಂಡು ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ಮಾಡಿದ್ರೆ ಸ್ವಾಗತ- ಸಚಿವ ಚಲುವರಾಯಸ್ವಾಮಿ.

0
3

ಬೆಳಗಾವಿ,ಡಿಸೆಂಬರ್,5,2023(www.justkannada.in):   ರಾಜ್ಯ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು  ಈ ನಡುವೆ ಸದನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಬಿಜೆಪಿ  ಜೆಡಿಎಸ್ ನವರು ಯಾವಾಗ ಜಂಟಿ ಕದನ ಮಾಡಿಲ್ಲ ಹೇಳಿ. ಕಳೆದ 6 ತಿಂಗಳಿನಿಂದ ಬಿಜೆಪಿ ಜೆಡಿಎಸ್ ನವರು ಕದನ ಮಾಡುತ್ತಿದ್ದಾರೆ.  ಜನರಪ ಕಾಳಜಿ ಇಟ್ಟುಕೊಂಡು ಜಂಟಿ ಹೋರಾಟ ಮಾಡಿದ್ರೆ ಸ್ವಾಗತ. ಅವರು ಉತ್ತಮ ಸಲಹೆ ನೀಡಿದರೇ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಕೃಷಿ ಮಸೂದೆ ವಾಪಸ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಕೃಷಿ ಮಸೂದೆ ವಾಪಸ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

Key words: BJP-JDS- fight- jointly – Minister- Chaluvarayaswamy.