ಇಂದಿನಿಂದ ಜ.1ರವರೆಗೆ ನೈಟ್ ಕರ್ಪ್ಯೂ ಜಾರಿ : ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ

Promotion

ಮೈಸೂರು,ಡಿಸೆಂಬರ್,24,2020(www.justkannada.in) :  ಕೊರೊನಾ ರೂಪಾಂತರ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಡಿ.24ರಿಂದ ಜನವರಿ 1ರವರೆಗೆ ಪ್ರತಿದಿನ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಿರುವುದಾಗಿ ಮೈಸೂರು ನಗರ ಪೊಲೀಸರ್ ಆಯುಕ್ತ ಡಾ.ಚಂದ್ರಗುಪ್ತ ಹೇಳಿದ್ದಾರೆ.

Teachers,solve,problems,Government,bound,Minister,R.Ashok

ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲ-ಕಾಲಕ್ಕೆ ಕಟ್ಟುನಿಟ್ಟಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಕೊರೊನಾ ರೂಪಾಂತರ ವೈರಸ್ ದೇಶದಾದ್ಯಂತ ಹರಡುವ ಸಂಭವವಿರುವುದರಿಂದ ಇದನ್ನೂ ಪ್ರಾರಂಭಿಕ ಹಂತದಲ್ಲಿ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದಿದ್ದಾರೆ.

ಅಂಗಡಿ ಮುಂಗಟ್ಟು ವ್ಯಾಪಾರ, ಸಾರ್ವಜನಿಕರ ಸಂಚಾರ ಬಂದ್

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಂಜಾಗ್ರತ ಕ್ರಮವಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ನೈಟ್ ಕರ್ಪ್ಯೂ ಅವಧಿಯಲ್ಲಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಹಾಗೂ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿ ನಿಷೇಧಾಜ್ಞೆಯನ್ನು ಘೋಷಿಸಲಾಗಿದೆ.

ಎಲ್ಲಾ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ವಹಿವಾಟನ್ನು ರಾತ್ರಿ 10.30ಕ್ಕೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. ಕರ್ಪ್ಯೂ ಜಾರಿಯಾಗುವ ಮೊದಲೇ ಸಾರ್ವಜನಿಕರು ತಮ್ಮ ವಾಸಸ್ಥಾನಗಳನ್ನು ಸೇರಬೇಕು ಎಂದು ಸೂಚಿಸಲಾಗಿದೆ.

ಯಾವುದಕ್ಕೆ ರಿಯಾಯಿತಿ?

ಹಾಲು ಮಾರಾಟ, ಔಷಧಾಲಯ, ವೈದ್ಯಕೀಯ ಸೇವೆಗಳು, ಆಹಾರ ಪದಾರ್ಥಗಳ ಹೋಂ ಡೆಲಿವರಿ ಹಾಗೂ ಕಿಚನ್ ಸೇವೆಗಳು. ಸರಕು ಸಾಗಾಣಿಕೆ ವಾಹನಗಳು(ಖಾಲಿ ವಾಹನಗಳನ್ನು ಒಳಗೊಂಡಂತೆ) ಎಲ್ಲಾ ಮಾದರಿಯ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ.

ರಾತ್ರಿಯ ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸುವ ಅವಶ್ಯಕತೆ ಇರುವಂತಹ ಎಲ್ಲಾ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ರಾತ್ರಿ ಪಾಳಿಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ. ಇಂತಹ ಸಂಸ್ಥೆಗಳ ಸಿಬ್ಬಂದಿಗಳು ಆಯಾ ಸಂಸ್ಥೆಗಳು ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಹೊಂದಿರತಕ್ಕದ್ದು ಹಾಗೂ ತಪಾಸಣೆ ವೇಳೆಯಲ್ಲಿ ಹಾಜರು ಪಡಿಸುವುದು ಎಂದು ಮಾಹಿತಿ ನೀಡಿದ್ದಾರೆ.

ಅಧಿಕೃತ ಪ್ರಯಾಣದ ಟಿಕೇಟ್ ಇದ್ದರೆ ಟ್ಯಾಕ್ಸಿ ಗೆ ಅವಕಾಶ

now-Until-January1-Night Curfew-Enforcement-Commissioner-Police-Dr.Chandragupta

ದಿನದ 24 ಗಂಟೆಗಳು ಅತ್ಯವಶ್ಯಕವಾಗಿ ಕಾರ್ಯಚರಿಸಬೇಕಾದಂತಹ ಕೈಗಾರಿಕೆಗಳು ಮತ್ತು ಕಾರ್ಖಾನೆಗಳಿಗೆ ಯಾವುದೇ ನಿರ್ಬಂಧಗಳಿಲ್ಲದೇ ಅನುಮತಿಸಿದೆ. ಅಧಿಕೃತ ಪ್ರಯಾಣದ ಟಿಕೇಟ್ ಗಳನ್ನು ಹೊಂದಿರುವ ಪ್ರಯಾಣಿಕರನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಿಂದ ಕರೆತರಲು ಮತ್ತು ಬಿಟ್ಟು ಬರಲು ಟ್ಯಾಕ್ಸಿ ಮತ್ತು ಆರೋಗಳ ಸಂಚಾರಕ್ಕೆ ಅನುಮತಿ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words : now-Until-January1-Night Curfew-Enforcement-Commissioner-Police-Dr.Chandragupta