ಇದೀಗ ಕನ್ನಡದಲ್ಲೂ ನೋಡಿ ‘ಮಾಲ್ಗುಡಿ ಡೇಸ್​’ !

Promotion

ಬೆಂಗಳೂರು, ಅಕ್ಟೋಬರ್ 21, 2019 (www.justkannada.in):
ಶಂಕರ್​ ನಾಗ್​ ನಿರ್ದೇಶನ ಮಾಡಿರುವ ‘ಮಾಲ್ಗುಡಿ ಡೇಸ್​’ ಅನ್ನು ಕನ್ನಡದಲ್ಲೂ ನೋಡುವ ಅವಕಾಶ ಸಿಕ್ಕಿದೆ.

ಇಂಗ್ಲಿಷ್​, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹತೇಕ ಭಾಷೆಗಳಿಗೆ ಡಬ್​ ಮಾಡಲಾಗಿತ್ತು. ಆದರೆ ಈಗ ಅದು ಕನ್ನಡಕ್ಕೂ ಡಬ್​ ಆಗಿದ್ದು, ಅದನ್ನು ನೋಡುವ ಅವಕಾಶ ಕನ್ನಡಿಗರದ್ದಾಗಿದೆ.

ಕನ್ನಡದವರೇ ನಿರ್ದೇಶಿಸಿ, ನಿರ್ಮಿಸಿ, ಅಭಿನಯಿಸಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನುಕನ್ನಡಕ್ಕೆ ಡಬ್​ ಮಾಡಿ, ಪ್ರಸಾರ ಮಾಡಬೇಕೆಂದು ಬನವಾಸಿ ಬಳಗ ಎಂಬ ಕನ್ನಡ ಪರ ಸಂಘಟನೆಯೊಂದು ಟ್ವಿಟರ್​ ಹಾಗೂ ಫೇಸ್​ಬುಕ್​ನಲ್ಲಿ ಎಂಬ ಅಭಿಯಾನವನ್ನು ಆರಂಭಿಸಿತ್ತು. ಈಗ ಅವರ ಬಹಳ ವರ್ಷಗಳ ಶ್ರಮಕ್ಕೆ ಫಲಿತಾಂಶ ಸಿಕ್ಕಿದೆ.