ನಾಳೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ಸ್ಪೀಕರ್ ಕಚೇರಿಯಿಂದ ನೋಟೀಸ್ ಜಾರಿ…

Promotion

ಬೆಂಗಳೂರು,ಜು,22,2019(www.justkannada.in): ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಕಾಂಗ್ರೆಸ್ ದೂರಿನ ಆಧಾರದ ಮೇಲೆ  ಸ್ಪೀಕರ್ ಕಚೇರಿಯಿಂದ  ನೋಟೀಸ್ ನೀಡಲಾಗಿದೆ.

ಸಚಿವಾಲಯ ಕಾರ್ಯದರ್ಶಿಯಿಂದ 12 ಮಂದಿ ಅತೃಪ್ತ ಶಾಸಕರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ರಾಜೀನಾಮೆ ನೀಡಿರುವ ಶಾಸಸಕರನ್ನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಸ್ಪೀಕರ್  ಗೆ ದೂರು ನೀಡಿತ್ತು. ಈ ಹಿನ್ನೆಲೆ ನೋಟೀಸ್ ನೀಡಲಾಗಿದೆ.

ಇನ್ನು ಇಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಬೇಕಾದ ಒತ್ತಡದಲ್ಲಿದ್ದು ಹೀಗಾಗಿ ಸಮ್ಮಿಶ್ರ ಸರ್ಕಾರ ಅಳಿವು ಉಳಿವು ಇಂದು ನಿರ್ಧಾರವಾಗಲಿದೆ.

Key words: notice – Speaker Office – issued –rebel MLA