ಡಿಕೆ ಶಿವಕುಮಾರ್ ಗೆ ಇಡಿ ಬುಲಾವ್  ಹಾಗೂ ಪುತ್ರಿ ಐಶ್ವರ್ಯಗೆ ಸಿಬಿಐನಿಂದ ನೋಟಿಸ್.

ಬೆಂಗಳೂರು,ಫೆಬ್ರವರಿ,8,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಇಡಿ ಮತ್ತು ಸಿಬಿಐ ಶಾಕ್ ನೀಡಿವೆ.

ಫೆ.27 ರಂದು ವಿಚಾರಣೆಗೆ ಬರುವಂತೆ  ಡಿ.ಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಹಾಗೆಯೇ  ಡಿಕೆ ಶಿವಕುಮಾರ್  ಪುತ್ರಿ ಐಶ್ವರ್ಯಗೆ ಸಿಬಿಐ ನೋಟಿಸ್ ನೀಡಿದೆ. ನೋಟಿಸ್ ಬಂದಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಡಿ.ಕೆ ಶಿವಕುಮಾರ್,  ನನಗೆ ಇಡಿಯಿಂದ ನೊಟೀಸ್ ಬಂದಿದೆ. ನನ್ನ ಮಗಳಿಗೆ ಸಿಬಿಐ ನೋಟಿಸ್ ನೀಡಿದೆ. ಮಗಳ ಕಾಲೇಜು ಶುಲ್ಕ ಕಟ್ಟಿದ ಬಗ್ಗೆ ಮಾಹಿತಿ ಪಡೆಯಲು ನೋಟೀಸ್ ನೀಡಲಾಗಿದೆ. ನಾನು ಪ್ರಜಾಧ್ವನಿಯಾತ್ರೆ ಮಾಡಲೋ ಅಥವಾ ಇಡಿ ವಿಚಾರಣೆಗೆ ಹಾಜರಾಗಲೋ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಷ್ಟು ಫೀಸ್ ಕಟ್ಟಿದ್ದೀರಿ. ಪಾಸ್ ಆಗಿದ್ದಾರಾ  ಇದೆಲ್ಲವನ್ನೂ ಸಿಬಿಐ ಕೇಳುತ್ತಿದೆ.  ಈ ಸಂದರ್ಭದಲ್ಲಿ ಇವೆಲ್ಲಾ ನಡೆಯುತ್ತಿದೆ. ಕೇವಲ ನಮಗೆ ಮಾತ್ರ ಇಡಿ ಸಿಬಿಐ ಇರುವುದು. ಆಡಳಿತಪಕ್ಷದವರಿಗೆ ಇಡಿ ಸಿಬಿಐ ಇಲ್ಲ. ಎಷ್ಟು ಕೋಟಿಯಾದರೂ ತಿನ್ನಿ ಇಡಿ ಕೇಳುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

Key words: Notice – CBI – ED -DK Shivakumar-daughter