ನಾನು ದಲಿತ ನಾಯಕ ಅಲ್ಲ. ಕಾಂಗ್ರೆಸ್ ನಾಯಕ- ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ.

kannada t-shirts

ಬೆಂಗಳೂರು,ಜೂನ್,15,2022(www.justkannada.in): ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡುರುವುದನ್ನ ವಿರೋಧಿಸಿ ಕಾಂಗ್ರೆಸ್ ಮೂರನೇ ದಿನವೂ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನ ಇಡಿ ವಿಚಾರಣೆಗೆ ಕರೆದಾಗ ಬೀದಿಗಿಳಿಯದ ಕಾಂಗ್ರೆಸ್ ಇದೀಗ ರಾಹುಲ್ ಗಾಂಧಿ ವಿಚಾರಣೆ ವೇಳೆ ಏಕೆ ಪ್ರತಿಭಟನೆಗೆ ಮುಂದಾಗಿದ್ದಾರೆಂದು ಬಿಜೆಪಿ ಟೀಕಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ,  ನಾನು ದಲಿತ ನಾಯಕ ಅಲ್ಲ. ಕಾಂಗ್ರೆಸ್ ನಾಯಕ. ಬಿಜೆಪಿಯವರು ಹುಚ್ಚರು ಎಂದು ಗುಡುಗಿದ್ದಾರೆ.70-year-old-coronavirus-vaccine-young-people-mallikarjuna-kharge

ಇದು ಬಿಹೆಪಿ ಇಬ್ಬಾಗ ಮಾಡುವ ನೀತಿ.  ವಿಷಯಾಂತರ ಮಾಡಿದ್ರೆ ಬಿಜೆಪಿಗೆ ಏನು ಸಿಗಲ್ಲ.  ಕಾಂಗ್ರೆಸ್ ಶಕ್ತಿ ಕುಂದಿಸಲು ಪ್ರಯತ್ನ ಮಾಡಲಾಗುತ್ತಿದೆ.  ರಾಹುಲ್ ಗಾಂಧಿ ಏನು ತಪ್ಪು ಮಾಡಿಲ್ಲ. ರಾಹುಲ್ ಗಾಂಧಿಗೆ  ಕಿರುಕುಳ ನೀಡಲೇಂದೆ ಪದೇ ಪದೇ ವಿಚಾರಣೆ ನಡೆಸುತ್ತಿದ್ದಾರೆ. 100 ಪ್ರಶ್ನೆ ಕೇಳಿದರೂ ಅವರು ಉತ್ತರಿಸುತ್ತಾರೆ. ಹೀಗಾಗಿ ನಮ್ಮ ಹೋರಾಟ ನಿಲ್ಲಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Key words:   not-Dalit –leader-Congressman-Mallikarjuna kharge

website developers in mysore