ನಾನು ಕುಟುಂಬ ರಾಜಕಾರಣದಿಂದ ಬಂದಿಲ್ಲ: ಅಣಬೆಗಳ ರೀತಿಯೂ ಬೆಳೆದವನಲ್ಲ-ಮಾಜಿ ಸಿಎಂ ಹೆಚ್.ಡಿಕೆಗೆ ಸಚಿವ ಆರ್.ಅಶೋಕ್ ಟಾಂಗ್…

Promotion

ಬೆಂಗಳೂರು,ನ,27,2019(www.justkannada.in):  ನಾನು ಕುಟುಂಬ ರಾಜಕಾರಣದಿಂದ ಬಂದಿಲ್ಲ, ಅಣಬೆಗಳ ರೀತಿಯೂ ಬೆಳೆದವನಲ್ಲ. ಹೋರಾಟದ ಮೂಲಕ ಬೆಳೆದು ಬಂದಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ನಮ್ಮ ಕುಟುಂಬದಲ್ಲಿ ಯಾರೂ ರಾಜಕಾರಣಿಗಳಾಗಿರಲಿಲ್ಲ.  ನಾನು ಕುಟುಂಬದ ಹಿನ್ನೆಲೆಯಲ್ಲಿ ಬಂದವನಲ್ಲ. ತಾವು ಮೋದಿ, ಆಡ್ವಾಣಿ ಹೆಸರು ಹೇಳಿದ್ದು ನಿಜ. ಆದರೆ ಅವರೆಲ್ಲಾ ಕುಟುಂಬ ನಾಯಕರಲ್ಲ, ಸಾರ್ವಜನಿಕ ನಾಯಕರು. ಕುಮಾರಸ್ವಾಮಿ ರೀತಿ ನಾವೇನು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರಲ್ಲ ಎಂದು ತಿರುಗೇಟು ನೀಡಿದರು.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ನಿವೃತ್ತರಾಗಬೇಕು. ಶರತ್ ಬಚ್ಚೇಗೌಡರಿಗೆ ಇನ್ನೂ ಅವಕಾಶವಿದೆ.  ಸಂಸದ ಬಿ.ಎನ್ ಬಚ್ಚೇಗೌಡ ಜತೆ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿದ್ದಾರೆ. ಬಚ್ಚೇಗೌಡರು ಪಕ್ಷದ ಶಿಸ್ತಿನ ಸಿಪಾಯಿ. ಪ್ರಚಾರಕ್ಕೆ ಬಂದೇ ಬರ್ತಾರೆ ಎಂದು ನುಡಿದರು.

ಜೆಡಿಎಸ್ –ಕಾಂಗ್ರೆಸ್ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದರು. ಈಗ ಒಂದೇ ಬುಟ್ಟಿಯಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ.  ಸೋಲಿನ ಭಯದಿಂದ ಒಳಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಸಚಿವ ಆರ್.ಅಶೋಕ್ ಆರೋಪಿಸಿದರು.

Key words:  not come – family politics-minister-R. Ashok –Tong-former CM-HD kumaraswamy