ನಾಳೆ ಭಾನುವಾರ ಕರ್ಫ್ಯೂ ಇರುವುದಿಲ್ಲ: ಎಂದಿನಂತೆ ಜನ ಜೀವನ….

Promotion

ಬೆಂಗಳೂರು,ಮೇ,30,2020(www.justkannada.in): ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರ ಕರ್ಫ್ಯೂ ಘೋಷಿಸಿತ್ತು. ಆದರೆ ಇದೀಗ ಭಾನುವಾರದ ಕರ್ಫ್ಯೂ ತೆರವು ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಈ ಮೊದಲಿನಂತೆ ಭಾನುವಾರ ಕರ್ಫ್ಯೂ ಇರುವುದಿಲ್ಲ.ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ಸೇವೆಗಳು ಎಂದಿನಂತೆ ಇರುತ್ತದೆ.ನಾಳೆ ಎಂದಿನಂತೆ ದೈನಂದಿನ ಚಟುವಟಿಕೆಗಳು ನಡೆಯಲಿವೆ. ಬಸ್‌, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲ ಸೇವೆಗಳೂ ಈ ಹಿಂದಿನಂತೆ ಮುಂದುವರಿಯಲಿವೆ. ಭಾನುವಾರದ ಕಂಪ್ಲೀಟ್‌ ಲಾಕ್‌ ಡೌನ್‌ ಕಳೆದ ವಾರ ಜಾರಿಗೆ ತರಲಾಗಿತ್ತು. ಆದರೆ ನಾಳಿನ ಲಾಕ್ ಡೌನ್ ತೆರವುಗೊಳಿಸಲಾಗಿದೆ.

Key words: no –Sunday- curfew- tomorrow.