ಅಸಮಾಧಾನವಿಲ್ಲ: ರಾಮನ ಭಂಟನಾಗಿ ಸರ್ಕಾರ ರಕ್ಷಿಸುವೆ-ಶಾಸಕ ರೇಣುಕಾಚಾರ್ಯ ಹೇಳಿಕೆ…

Promotion

ಬೆಂಗಳೂರು,ಆ,20,2019(www.justkannada.in): ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ. ನಾನು ಆಂಜನೇಯನ ರೀತಿ ರಾಮನ ಭಂಟನಾಗಿ ಸರ್ಕಾರವನ್ನ ರಕ್ಷಿಸುವೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ಇಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಸಚಿವ ಸ್ಥಾನ  ದೊರೆಯದಿದ್ದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ. ಸಚಿವ ಸ್ಥಾನಕ್ಕೆ ಒತ್ತಾಯಿಸಿ ಯಾರೂ ಪ್ರತಿಭಟನೆ ಮಾಡಬಾರದು. ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಬಾಲಚಂದ್ರ ಜಾರಕಿಹೋಳಿ, ಮಾಡಾಳ್ ವಿರೂಪಾಕ್ಷ ಪ್ಪ ನಾವೆಲ್ಲ ಹಳೆ ಸ್ನೇಹಿತರು ಒಂದು ಕಡೆ ಸೇರಿ ಊಟ ಮಾಡಿದ್ದಕ್ಕೆ ಮಾಧ್ಯಮಗಳು ಅಪಾರ್ಥ ಕಲ್ಪಿಸಿರುವುದು ಸರಿಯಲ್ಲ. ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿದ್ದು ಅಸಮಾಧಾನದಿಂದ ಅಲ್ಲ ಎಂದು ಹೇಳಿದರು.

ನಾನು ರಾಮನ ಭಂಟನ ಹಾಗೆ ಯಡಿಯೂರಪ್ಪ ಜತೆ ಇದ್ದೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ಶಿಸ್ತಿನ ಸಿಪಾಯಿ. ನಮ್ಮ ಯಾವ ಶಾಸಕರಿಗೂ ಅಸಮಾಧಾನವಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತೇನೆ.  ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

Key words: no resentment- protect-government –MLA-MP Renukacharya.