ಸೋಯಾಬೀನ್ – ಪುರುಷರು ಉಪಯೋಗಿಸಬಹುದೇ ? Soybean for Men ?

ಸೋಯಾಬೀನ್ ದಲ್ಲಿ ಕೆಲವು ಜೈವಿಕ ಅಣುಗಳು ಪುರುಷರ ಸಂತಾನ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳಿವೆ . ಅವುಗಳಲ್ಲಿ ಐಸೊಫ್ಲ್ಯಾವೊನ್ಸ್ , ಫೈಟೇಟ್ಸ ಹಾಗು ಗಾಯಿಟ್ರೋಜೆನ್ಸ್ ಮುಖ್ಯವಾದವು .

ಚರಿತ್ರಾಕಾರರು ಸೋಯಾಬೀನ್ ಮೂಲ ಚೀನಾದ ಉತ್ತರ ಭಾಗ ಎಂದು ಅಭಿಪ್ರಾಯ ಪಡುತ್ತಾರೆ . ಪ್ರಸ್ತುತ ಚೀನಾದಲ್ಲಿ ಬಾರ್ಲಿ , ಅಕ್ಕಿ , ಗೋಧಿ ಮತ್ತು ನವಣೆಗಳೊಂದಿಗೆ ಸೋಯಾಬೀನನ್ನೂ ಸಹ ಪ್ರಮುಖ ಆಹಾರವಾಗಿ ಬಳಸುತ್ತಾರೆ .

ಸೋಯಾಬೀನ್ ಬಗ್ಗೆ  ಚೀನೀ ವೈದ್ಯ ಶಾಸ್ತ್ರ ಏನು ಹೇಳುತ್ತದೆ ?

ಚೀನಾದ ಪುರಾತನ ವೈದ್ಯಕೀಯ ಶಾಸ್ತ್ರದಲ್ಲಿ ಕಚ್ಚಾ ಸೋಯಾಬೀನ್ ಮನುಷ್ಯರು ಉಪಯೋಗಿಸಬಾರದೆಂದೇ ಹೇಳಿದೆ. ಕಚ್ಚಾ ಸೋಯಕ್ಕಿಂತ ಹುದುಗಿಸಿ ಹುಳಿ ಬಂದಂತಹ ಸೋಯಾ ಮೇಲು ಎಂಬುದು ಅವರ ಅಭಿಪ್ರಾಯ. ಆದರೆ ಆಯುರ್ವೇದ ಶಾಸ್ತ್ರದಲ್ಲಿ ಹುದುಗಿಸಿ ಹುಳಿ ಬಂದಂತಹ ಪದಾರ್ಥಗಳನ್ನು ಉಪಯೋಗಿಸಬಾರದೆಂದೇ ಹೇಳಲಾಗುತ್ತದೆ .