ರಾಫೆಲ್ ಜೊತೆ ಮದುವೆ ಸುದ್ದಿ: ಸತ್ಯಕ್ಕೆ ದೂರ ಎಂದ ರಮ್ಯಾ ತಾಯಿ

Promotion

ಬೆಂಗಳೂರು, ಆಗಸ್ಟ್ 22, 2019 (www.justkannada.in): ರಮ್ಯಾ ಮದುವೆ ಕುರಿತು ಅವರ ತಾಯಿ ಮಾತನಾಡಿದ್ದಾರೆ.

ರಮ್ಯಾ ಮದುವೆಯನ್ನು ಕದ್ದುಮುಚ್ಚಿ ಮಾಡುವ ಅಗತ್ಯವಿಲ್ಲ. ಮಾಧ್ಯಮ, ಸಿನಿಮಾ, ಗೆಳೆಯರು ಎಲ್ಲರಿಗೂ ಹೇಳಿಯೇ ಮಾಡುತ್ತೇವೆ ಎಂದಿದ್ದಾರೆ.

ರಮ್ಯಾಗೆ ಅವರ ದೇಶಕ್ಕೆ ಹೋಗಲು ಇಷ್ಟವಿರಲಿಲ್ಲ, ರಾಫೆಲ್‌ಗೆ ಇಲ್ಲಿಗೆ ಬರಲು ಇಷ್ಟವಿರಲಿಲ್ಲ. ಈ ರೀತಿಯ ಭಿನ್ನಾಭಿಪ್ರಾಯಗಳ ಕಾರಣ ಮದುವೆ ಮುಂದಕ್ಕೆ ಹೋಗಲಿಲ್ಲ.
ಸದ್ಯಕ್ಕೆ ರಮ್ಯಾ ದಿಲ್ಲಿಯಲ್ಲೇ ಇದ್ದಾರೆ.

ದುಬೈನಲ್ಲಿ ರಾಫೆಲ್ ಜತೆಗೆ ಮದುವೆಯಾಗುತ್ತಾರೆ ಎಂಬುದು ಕೇವಲ ವದಂತಿ ಅಷ್ಟೆ. ರಮ್ಯಾ ಮತ್ತು ರಾಫೆಲ್ ನಡುವಿನ ಉತ್ತಮ ಸ್ನೇಹಿತರಾಗಿದ್ದಾರೆ. ಆದರೆ ಮದುವೆಯಾಗುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.