ಹೆದರಿ ಓಡಿಹೋಗುವ ಪ್ರಶ್ನೆಯೇ ಇಲ್ಲ: ಹಾಸನ ಕ್ಷೇತ್ರವನ್ನ ಸವಾಲಾಗಿ ಸ್ವೀಕರಿಸುತ್ತೇನೆ- ಮಾಜಿ ಸಚಿವ ಹೆಚ್.ಡಿ ರೇವಣ್ಣ.

Promotion

ಹಾಸನ,ಫೆಬ್ರವರಿ,25,2023(www.justkannada.in):  ಹೆದರಿ ಓಡಿಹೋಗುವ ಪ್ರಶ್ನೆಯೇ ಇಲ್ಲ. ನಾನು ಹಾಸನ ಕ್ಷೇತ್ರವನ್ನ ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮಿ ಸರ್ಕಾರ  ಪತನದ ಬಳಿಕ ನಮ್ಮ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ಹಾಕುತ್ತಿದ್ದಾರೆ. ನಿನ್ನೆ ಉಗನೆ ಗ್ರಾಮಕ್ಕೆ ಹೋದಾಗ ಜನ ನಮಗೆ ರಕ್ಷಣೆ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಕೇಸ್ ಹಾಕಿ ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿಸಿ ಜೈಲಿಗೆ ಕಳಿಸುವುದು, ಗಡಿಪಾರು ಮಾಡಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ. ಕೆಲವರು ದುಡ್ಡಿನಿಂದ ನಾವು ಕೊಳ್ಳುತ್ತೇವೆ, ನಾವು ರೌಡಿಸಂ ಮಾಡೇ ಮಾಡುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಹಾಸನ ಕ್ಷೇತ್ರವನ್ನು ನಾನು ಚಾಲೆಂಜ್​ ಆಗಿ ತೆಗೆದುಕೊಳ್ಳುತ್ತೇನೆ. ಏನಾಗುತ್ತೋ ನೋಡೋಣ ಹೆದರಿ ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂದರು.

Key words: no question – fear-accept- Hassan- challenge-Former minister- HD Revanna.