ದೇಶದ ವಿಚಾರದಲ್ಲಿ ರಾಜಕೀಯ ಬೇಡ: ಪಾಕ್ ಪರ ಘೋಷಣೆ ಕೂಗಿದ್ರೆ ನಾನು ಸಹಿಸಲ್ಲ-ಮಾಜಿ ಸಚಿವ ಡಿ.ಕೆ ಶಿವಕುಮಾರ್…

Promotion

ಬೆಂಗಳೂರು,ಫೆ,23,2020(www.justkannada.in):  ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣ ಸಂಬಂಧ ಪಾಕ್ ಪರ ಘೋಷಣೆ ಕೂಗಿದ್ರೆ ನಾನೂ ಸಹಿಸಲ್ಲ. ಆದರೆ ದೇಶದ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಆ ಹೆಣ್ಣು ಮಗಳು ಏನೋ ಹೇಳಲು ಹೊರಟಿದ್ದಳೊ.? ಅಮೂಲ್ಯ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೇನೋ…? ಆದರೆ ಅವಳನ್ನ ತಡೆದಿದ್ದಾರೆ. ಆದರೇ ದೇಶದ ವಿಚಾದಲ್ಲಿ ರಾಜಕೀಯ ಬೇಡ. ಧ್ವನಿ ಎತ್ತುವುದನ್ನ  ಮೊಟಕುಗೊಳಿಸಬಾರದು ಎಂದರು.

ಅಮೂಲ್ಯಳ ಹಳೆಯ ವಿಡಿಯೋಗಳನ್ನು ನೋಡಿದ್ದೇನೆ. ಅವಳದ್ದೆ ಆದ ತತ್ವವನ್ನು ಆಕೆ ಹೊಂದಿದ್ದಾಳೆ. ಆದರೆ ಅವಳ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದು ದೇಶದ ವಿಚಾರ. ನಮ್ಮ ದೇಶವನ್ನು ಅಗೌರವದಿಂದ ಕಾಣುವುದು. ಬೇರೆ ದೇಶದ ಪರವಾಗಿ ನಿಂತುಕೊಳ್ಳುವಂತದ್ದಲ್ಲ. ಯಾರು ಅದಕ್ಕೆ ಪ್ರೋತ್ಸಾಹ ಕೊಡಬಾರದು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

Key words: no politics – country-Former minister- DK Sivakumar- cannot -tolerate – pro-Pak