ನಮ್ಮ ಕಷ್ಟ ಕೇಳಲು ಯಾರೂ ಬಂದಿಲ್ಲ: ಸರ್ಕಾರ, ಜಿಲ್ಲಾಡಳಿತ ಜನಪ್ರತಿನಿಧಿಗಳ ವಿರುದ್ದ ನೆರೆ ಸಂತ್ರಸ್ತರಿಂದ ಪ್ರತಿಭಟನೆ…

Promotion

ಕೊಡಗು,ಆ,13,2019(www.justkannada.in): ಕಾವೇರಿ ನದಿ ನೀರು ಉಕ್ಕಿ ಹರಿದು  ಎಲ್ಲವನ್ನೂ ಕಳೆದುಕೊಂಡಿದ್ದೇವೆ  ನಮ್ಮ ಕಷ್ಟ ಕೇಳಲು ಯಾರು ಬಂದಿಲ್ಲ ಎಂದು ಕೊಡಗು ಜಿಲ್ಲಾಡಳಿತ, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ದ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಗುಯ್ಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸರ್ಕಾರ, ಜಿಲ್ಲಾಡಳಿತ ವಿರುದ್ದ ಪ್ರತಿಭಟನೆ ಮಾಡಿದ ಗುಯ್ಯ ಗ್ರಾಮಸ್ಥರು, ಕಾವೇರಿ ನದಿ ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಆದರೆ ಯಾರೂ ಬಂದು ಸಹ ನಮ್ಮ ಕಷ್ಟ ಸಮಸ್ಯೆ ಆಲಿಸಿಲ್ಲ.  ನೆರೆ ಸಂತ್ರಸ್ತರಿಗೆ ಮೂಲಭೂತ ಸೌಕರ್ಯವನ್ನ ನೀಡಿಲ್ಲ ಎಂದು ಆರೋಪಿಸಿದರು.

Key words: No one- came –hear- our difficulty- Neighbors -protest -kodagu