ಯತ್ನಾಳ್ ಗೆ ನೋಟಿಸ್ ನೀಡಿಲ್ಲ: ನೋಟಿಸ್ ಕೊಟ್ಟರೇ ಸುಮ್ಮನಿರಲ್ಲ- ಜಯಮೃತ್ಯುಂಜಯ ಸ್ವಾಮೀಜಿ  ಎಚ್ಚರಿಕೆ.

Promotion

ಬೆಂಗಳೂರು,ಜನವರಿ,17,2023(www.justkannada.in):  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿಲ್ಲ. ನೋಟಿಸ್ ಕೊಟ್ಟರೆ ಸುಮ್ಮನಿರಲ್ಲ ಎಂದು ಬಿಜೆಪಿ ನಾಯಕರಿಗೆ  ಜಯಮೃತ್ಯಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಮತ್ತು ತಮ್ಮ ಪಕ್ಷದವರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿತ್ತು ಎಂದು ವರದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ನೋಟಿಸ್  ನೀಡಿಲ್ಲ. ನೋಟಿಸ್ ಕೊಟ್ಟರೆ ಪಂಚಮಸಾಲಿ ಸಮುದಾಯ ಯತ್ನಾಳ್ ಪರ ನಿಲ್ಲುತ್ತೆ ರಾಜಕೀಯ ವೈರಿಗಳು ಯತ್ನಾಳ್ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

Key words: No notice– Yatnal- -Jayamruthyunjaya Swamiji’-warning.