ರಾಜ್ಯದಲ್ಲಿ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಅಗತ್ಯವಿಲ್ಲ-  ಸಚಿವ ಸುಧಾಕರ್ ಸ್ಪಷ್ಟನೆ…

ಬೆಂಗಳೂರು,ಡಿಸೆಂಬರ್,29,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿಗೆ ಬ್ರಿಟನ್ ನಿಂದ  ಬಂದ ಮೂವರಲ್ಲಿ ಹೊಸ ಪ್ರಬೇಧದ ಕೊರೋನಾ ಪತ್ತೆಯಾಗಿದೆ. ದೇಶದಲ್ಲಿ ಒಟ್ಟು 6 ಮಂದಿಗೆ ಕೊರೋನಾ ರೂಪಾಂತರ ಪತ್ತೆಯಾಗಿದೆ. ಆದರೆ ಇದರೆ ಬಗ್ಗೆ ಯಾವುದೇ ಭಯಪಡಬೇಕಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಹೊಸ ಕೊರೋನಾ ರೂಪಾಂತರ ಪತ್ತೆಯಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮತ್ತು ಸೀಲ್ ಡೌನ್ ಅಗತ್ಯವಿಲ್ಲ. ಹೊಸಕೊರೋನಾ ರೂಪಾಂತರದ ಪರಿಣಾಮ ಹೆಚ್ಚಿಲ್ಲ ಈಗಾಗಲೇ ಸರ್ಕಾರದಿಂದ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. no need - lock down- seal down -again – state-Minister- Sudhakar -clarified.

ಹಾಗೆಯೇ ಶಾಲಾ ಕಾಲೇಜುಗಳ ಆರಂಭಕ್ಕೆಯಾವುದೇ ಅಡ್ಡಿ ಇಲ್ಲ. ನಿಗದಿಯಂತೆ ಜನವರಿ 1 ರಿಂದ ಶಾಲಾಕಾಲೇಜುಗಳು ಆರಂಭವಾಗಲಿದೆ. ರಾಜ್ಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಕೊರೋನಾ ಲಸಿಕೆ ಮಾರುಕಟ್ಟೆಗೆ ಬರಲಿದೆ. ಹೀಗಾಗಿ ಹೊಸ ಕೊರೋನಾ ರೂಪಾಂತರ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: no need – lock down- seal down -again – state-Minister- Sudhakar -clarified.