ನನಗೆ ಸಿಎಂ ಆಗುವ ಆಸೆ ಇಲ್ಲ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಜನವರಿ,20,2022(www.justkannada.in): ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ನಾನು ಸಿಎಂ ಆಗಿದ್ದರೆ ಈ ಬಗ್ಗೆ ಹೇಳುತ್ತಿದ್ದೆ. ಆದರೆ ನಾನು ಸಿಎಂ ಅಲ್ಲ ಅದು ಸಿಎಂ ಪರಮಾಧಿಕಾರ. ನನಗೆ ಸಿಎಂ ಆಗುವ ಆಸೆ ಇಲ್ಲ ಎಂದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ನಾನು ಈ‌ ಮಟ್ಟಕ್ಕೆ ಬೆಳೆದಿರುವುದು ನನಗೆ ತೃಪ್ತಿ ಇದೆ. ನಾನು ಸರ್ಕಾರದಲ್ಲಿ ಒಬ್ಬ ಸಾಮಾನ್ಯ ಸಚಿವ ಮಾತ್ರ. ನಾನು ಇಷ್ಟಾಗಿರುವುದೇ ದೊಡ್ಡ ವಿಚಾರ‌, ನನ್ನ ಅದೃಷ್ಟ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲು ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್,  ಇದು ಸಹಜವಾದ ಭೇಟಿ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಪಕ್ಷ ಸಂಘಟನೆ ಸರ್ಕಾರದ ಜವಾಬ್ದಾರಿ ಕುರಿತು ಚರ್ಚೆಗೆ ಭೇಟಿ ನೀಡಿದ್ದಾರೆ. ಪ್ರತಿ ತಿಂಗಳು ಈ ರೀತಿ ಭೇಟಿಯಾಗುತ್ತಾರೆ ಎಂದರು.

ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ ಸಮರ್ಥನೆ ಮಾಡಿಕೊಂಡ ಸಚಿವ ಎಸ್.ಟಿ ಸೋಮಶೇಖರ್, ಕೋವಿಡ್ ಬಗ್ಗೆ ತಜ್ಞರು ಬಿಟ್ಟು ಎಲ್ಲರೂ ಮಾತನಾಡಬಾರದು. ಸುಧಾಕರ್ ಜನರ ಹಿತದೃಷ್ಟಿಯಿಂದ ಈ ರೀತಿ ಹೇಳಿದ್ದಾರೆ. ಕೊರೊನಾ ಮೂರನೇ ಅಲೆ ಬಗ್ಗೆ ಒಬ್ಬಬ್ಬರೂ ಒಂದೊಂದು ಹೇಳಿಕೆ ನೀಡುವುದು ಸರಿಯಲ್ಲ. ಒಬ್ಬರು ಏನು ಪರಿಣಾಮ ಇಲ್ಲ ಅನ್ನುವುದು. ಮತ್ತೊಬ್ಬರು ಸಮಸ್ಯೆಯಾಗುತ್ತದೆ ಅನ್ನೋದು‌. ಇದು ಜನರಲ್ಲಿ ಭಯದ ವಾತಾವರಣಕ್ಕೆ ಕಾರಣವಾಗುತ್ತದೆ. ಆ ಕಾರಣದಿಂದಾಗಿ ಸುಧಾಕರ್ ಆ ರೀತಿ ಹೇಳಿದ್ದಾರೆ. ಆರೋಗ್ಯ ಸಚಿವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದರು.

Key words: no desire – become-CM-Minister -ST Somashekhar.