ನಾಳೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಇಲ್ಲ…

kannada t-shirts

ಬೆಂಗಳೂರು,ಡಿಸೆಂಬರ್,9,2020(www.justkannada.in): ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ ಬೆಂಗಳೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆlogo-justkannada-mysore.

ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಈ ಜಾಥಾ ಆರಂಭವಾಗಲಿದ್ದು, ಅಲ್ಲಿಂದ ವಿಧಾನಸೌಧಧವರೆಗೆ ಸಾರಿಗೆ ನೌಕರರು ಹೊರಡಲಿದ್ದಾರೆ. ಸಾರಿಗೆ ನೌಕರರ ಜಾಥ ಹಿನ್ನೆಲೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೆ.ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಎಸ್ ಆರ್ ಟಿಸಿ ಮುಖ್ಯಸಂಚಾರ ವ್ಯವಸ್ಥಾಪಕ ಪ್ರಭಾಕರರೆಡ್ಡಿ, ನಾಳೆ ಎಂದಿನಂತೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ನಾರ್ಮಲ್ ಆಗಿ ಇರುತ್ತದೆ. ನಮ್ಮ ನೌಕರರು ನಾಳೆ ಕೆಲಸಕ್ಕೆ ಗೈರಾಗುವುದಿಲ್ಲ. ದಿನನಿತ್ಯ 6 ಸಾವಿರ ಬಸ್ ಓಡಾಡುತ್ತಿದೆ. ಅಂತೆಯೇ ನಾಳೆಯೂ ಸಹ 6 ಸಾವಿರ ಬಸ್ ಗಳು ಓಡಾಟ ನಡೆಸಲಿವೆ. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದರೆ ಅವರು ತೆರಳಬೇಕಾಗುವ ಸ್ಥಳಕ್ಕೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.no-change-bus-traffic-ksrtc-bmtc-tomorrow

ಇನ್ನು ಬಿಎಂಟಿಸಿ ಬಸ್ ಸಂಚಾರ ವ್ಯತ್ಯಯ ಕುರಿತು ಪ್ರತಿಕ್ರಿಯಿಸಿರು ಬಿಎಂಟಿಸಿ ಭದ್ರತಾ, ಜಾಗೃತಾಧಿಕಾರಿ ಡಾ.ಕೆ.ಅರುಣ್, ನಾಳೆ ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ನಾಳೆ ಜಾಥದಲ್ಲಿ ಪಾಲ್ಗೊಳ್ಳುವ ನೌಕರರ ಸಂಬಳ ಕಡಿತ ಮಾಡಲಾಗುತ್ತದೆ. ಯಾವುದೇ ರೀತಿ ರಜೆ ಮಂಜೂರು ಮಾಡಲಾಗುವುದಿಲ್ಲ.  ಅನಿವಾರ್ಯ ಸಂದರ್ಭ ಹೊರತುಪಡಿಸಿ ಯಾವುದೇ ರಜೆ ನೀಡಲ್ಲ ಎಂದು ತಿಳಿಸಿದ್ದಾರೆ.

Key words: no change – bus traffic – KSRTC – BMTC- tomorrow.

website developers in mysore