ಡಿ.12ರಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಚಾಮರಾಜನಗರ,ಡಿಸೆಂಬರ್,09,2020(www.justkannada.in) : ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಡಿ.12ರಿಂದ  14ರವರೆಗೆ 3 ದಿನಗಳ ಕಾಲ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.logo-justkannada-mysore

ಕಡೇ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆಗಳು, ತೆಪ್ಪೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಕಾರಣಕ್ಕೆ ಕ್ರಮಕೈಗೊಳ್ಳಲಾಗಿದೆ.

ಈ ವರ್ಷದ ಎಲ್ಲಾ ಮುಖ್ಯ ಜಾತ್ರೆಗಳು, ರಥೋತ್ಸವಗಳಿಗೂ ಕೊರೊನಾ ಆಡಚಣೆ ಉಂಟು ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ದೀಪಾವಳಿ ರಥೋತ್ಸವವು ಕೂಡಾ ರದ್ದಾಗಿದೆ ಎಂದು ತಿಳಿದು ಬಂದಿದೆ.

 Restriction,pilgrims,access,Malemahadeshwara,hill,december 12

key words : Restriction-pilgrims-access-Malemahadeshwara-hill-december 12