ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ: ಏಕಾಂಗಿಯಾಗಿಯೇ ಬಿಜೆಪಿ ಅಧಿಕಾರಕ್ಕೆ ಬರುತ್ತೆ- ಕೇಂದ್ರ ಗೃಹ ಸಚಿವ ಅಮಿತ್ ಶಾ.

Promotion

ಬೆಂಗಳೂರು,ಡಿಸೆಂಬರ್,31,2022(www.justkannada.in): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕಾಂಗಿಯಾಗಿಯೇ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಅರಮನೆ ಮೈದಾನದಲ್ಲಿ ನಡೆದ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ,  ಈ ಬಾರಿ ಎಲೆಕ್ಷನ್ ನಲ್ಲಿ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಗೆ ಕಾಂಗ್ರೆಸ್ ಜೆಡಿಎಸ್ ಎದುರಾಳಿ ಅಲ್ಲ.  ಬಿಜೆಪಿ ಏಕಾಂಕಿಯಾಗಿಯೇ ಅದಿಕಾರಕ್ಕೆ ಬರಲಿದೆ. ದೇವೇಗೌಡರ ಸಿದ್ದರಾಮಯ್ಯ  ಮತ್ತು ಡಿಕೆಶಿ ನಿಮ್ಮ ಸಾಧನೆ ಏನು..? ನಿಮ್ಮ ಸಾಧನೆಗೆ ನಮ್ಮ ಕಾರ್ಯಕರ್ತರು ಉತ್ತರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ -ದಳ ಸರ್ಕಾರ ರಚಿಸಿದರೇ ಲೂಟಿ ಮಾಡುತ್ತಾರೆ. ಕರ್ನಾಟಕವನ್ನ ಎಟಿಎಂನಂತೆ ಬಳಸಿಕೊಳ್ಳುತ್ತಾರೆ.  ಪ್ರತಿ ಹಳ್ಳಿ, ಮನೆ, ಬೂತ್ ಮಟ್ಟದಲ್ಲಿ ಪ್ರಚಾರ ಮಾಡಿ . ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳನ್ನ ತಲುಪಿಸಿ. ದೇಶದಲ್ಲಿ ಕುಟುಂಬ ರಾಜಕಾರಣವನ್ನ ನಿರ್ಮೂಲನೆ ಮಾಡುತ್ತೇವೆ.  ಬಿಜೆಪಿಗೆ ಪೂರ್ಣ ಬಹುಮತದ ಅಧಿಕಾರ ನೀಡಿ ಎಂದು ಅಮಿತ್ ಶಾ ಮನವಿ ಮಾಡಿದರು.

Key words: no alignment -with -any party-BJP -will -come – power- Union Home Minister- Amit Shah.