ಬಿಜೆಪಿಗರು ಭಾರತ್ ಮಾತಾಕಿ ಜೈ ಅಂದರೇ, ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಗೆ ಜೈ ಅನ್ನುತ್ತಾರೆ- ಸಿಎಂ ಬೊಮ್ಮಾಯಿ ಟೀಕೆ.

ಬೆಂಗಳೂರು,ಡಿಸೆಂಬರ್,31,2022(www.justkannada.in): ಬಿಜೆಪಿಗರು ಭಾರತ್ ಮಾತಾಕಿ ಜೈ ಅಂದರೇ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಗೆ ಜೈ ಅನ್ನುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಅರಮನೆ ಮೈದಾನದಲ್ಲಿ ನಡೆದ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಇಡೀ ಜಗತ್ತಿನಲ್ಲೇ ಭಾರತೀಯ ಜನತಾ ಪಾರ್ಟಿ ದೊಡ್ಡ ಪಕ್ಷ. ಚೀನಾದ ಕಮ್ಯುನಿಸ್ಟ್ ಪಾರ್ಟಿಗಿಂತ ಹೆಚ್ಚು ಸದಸ್ಯರನ್ನ ಬಿಜೆಪಿ ಹೊಂದಿದೆ. ಸಂಖ್ಯೆಯಲ್ಲಿ ಮಾತ್ರವಲ್ಲ ವಿಚಾರದಲ್ಲೂ ವಿಶಾಲತೆ ಹೊಂದಿದ್ದೇವೆ ಎಂದರು.

ಒಂದು ಪಕ್ಷ ಯಶಸ್ವಿಯಾಗಲು ಮೂರು ವಿಚಾರಗಳು ಬಹಳ ಅಗತ್ಯ. ನೀತಿ ಸಿದ್ಧಾಂತ. ಒಳ್ಳೆಯ ನಾಯಕತ್ವ, ಜೊತೆಗೆ ಕ್ರಿಯಾಶೀಲ ಸದಸ್ಯರೂ ಕೂಡ ಪಕ್ಷದ ಯಶಸ್ಸಿಗೆ ಕಾರಣ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Key words:  BJP- Bharat Mataki Jai – Congress – Sonia Gandhi- CM -Bommai