‘ಡಿಯರ್ ವಿಕ್ರಮ್’ ನೋಡಲು ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿದ ನಿನಾಸಂ ಸತೀಶ್

Promotion

ಬೆಂಗಳೂರು, ಜೂನ್ 28, 2022 (www.justkannada.in): ನಟ ನಿನಾಸಂ ಸತೀಶ್ ಅವರು ಸೋಮವಾರ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಇದಕ್ಕೆ ಕಾರಣ ಅವರ ಮುಂದಿನ ಚಿತ್ರ  ಡಿಯರ್ ವಿಕ್ರಮ್.

ಹೌದು. ಇದೇ ಗುರುವಾರದಂದು ತೆರೆ ಕಾಣಲಿರುವ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿನಾಸಂ ಸತೀಶ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

ಕೆ.ಎಸ್. ನಂದೀಶ್ ನಿರ್ದೇಶನದ ಈ ಸಿನಿಮಾ ನಾಯಕತ್ವದ ಪ್ರಗತಿಪರ ಆಶಯಗಳನ್ನು ಒಳಗೊಂಡಿದೆ ಎಂದು ನಿನಾಸಂ ಸತೀಶ್ ಅವರು ವಿವರಿಸಿದ್ದಾರೆ.

ಡಿಯರ್ ವಿಕ್ರಮ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸಿದ ಸಿದ್ದರಾಮಯ್ಯ ಅವರು, ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.