ಅಮ್ಮನಿಗೆ ಶುಭ ಕೋರಿದ ನಿಖಿಲ್ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ!

Promotion

ಬೆಂಗಳೂರು, ಫೆಬ್ರವರಿ 25, 2020 (www.justkannada.in): ನಿಖಿಲ್ಕುಮಾರಸ್ವಾಮಿ ತಮ್ಮ ಇನ್ ‍ ಸ್ಟಾಗ್ರಾಮ್ ‍ ನಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಪ್ರೀತಿಯಿಂದ ವಿಶ್ ಮಾಡಿ , ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಮದುವೆ ಸಂಭ್ರಮದಲ್ಲಿರುವ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟ್ ಮಾಡಿ ಶುಭಾಶಯ ಕೋರಿದ್ದಾರೆ .

ನಿನ್ನ ತ್ಯಾಗ ಅಪಾರ , ಎಂದೆಂದಿಗೂ ಹೀಗೆ ನಗುತ್ತಿರು ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ . ಅಮ್ಮನ ಹುಟ್ಟುಹಬ್ಬಕ್ಕೆ ನಿಖಿಲ್ ಸ್ಪೆಷಲ್ ವಿಶ್ ಸದ್ಯ ಎಲ್ಲರ ಮನ ಗೆದ್ದಿದೆ .

ಹುಟ್ಟುಹಬ್ಬದ ಶುಭಾಶಯಗಳು ಅಮ್ಮ , ನಿನ್ನ ನನಗೆ ಜನ್ಮಕೊಟ್ಟಾಗಿನಿಂದಲೂ ನನಗಾಗಿ ನೀನು ಮಾಡಿದ ತ್ಯಾಗ ಅಪಾರ . ನನ್ನ ಜೀವನ ಪೂರ್ತಿ ನಾನು ನಿನಗೆ ಋಣಿಯಾಗಿರುತ್ತೇನೆ ಅಮ್ಮ . ನೀನು ಖುಷಿಯಾಗಿರುವುದನ್ನ ನೋಡಿದಾಗಲೆಲ್ಲಾ ನನ್ನ ಮುಖದಲ್ಲಿ ದೊಡ್ಡ ನಗು ಮೂಡುತ್ತದೆ . ಈ ಫೋಟೋದಲ್ಲಿ ಹೇಗೆ ನಗುತಿದಿಯೋ ಹಾಗೆಯೇ ಎಂದೆಂದಿಗೂ ನಗುತ್ತಿರು . ಯಾಕೆಂದರೆ ನೀನು ನಕ್ಕಾಗ ಇನ್ನೂ ಸುಂದರವಾಗಿ ಕಾಣುತ್ತೀಯ ಎಂದು ಬರೆದುಕೊಂಡಿದ್ದಾರೆ.