‘ಕೆಜಿಎಫ್ ಚಾಪ್ಟರ್ 2’ನಿಂದ ಅನಂತ್ ನಾಗ್ ಔಟ್ !

ಬೆಂಗಳೂರು, ಫೆಬ್ರವರಿ 25, 2020 (www.justkannada.in): ‘ಕೆಜಿಎಫ್ ಚಾಪ್ಟರ್‌ 2’ ಚಿತ್ರದಿಂದ ಅನಂತ್ ನಾಗ್ ಹೊರನಡೆದಿದ್ದಾರೆ ಎಂಬ ಸುದ್ದಿಹೊರಬಿದ್ದಿದೆ.

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ, ಪ್ರಶಾಂತ್ ನೀಲ್‌ ನಿರ್ದೇಶನದ ‘ಕೆಜಿಎಫ್‌ ಚಾಪ್ಟರ್‌ 1’ರಲ್ಲಿ ಆನಂದ್ ಇಂಗಳಗಿ ಎಂಬ ಪತ್ರಕರ್ತನ ಪಾತ್ರದಲ್ಲಿ ಅನಂತ್ ನಟಿಸಿದ್ದರು.

ಹೀಗಾಗಿ ಕೆಜಿಎಫ್‌ ಚಾಪ್ಟರ್ 2ನಲ್ಲಿ ಕೂಡ ಅನಂತ್‌ ನಾಗ್‌ ಅವರು ಇರಲಿದ್ದಾರೆ ಎನ್ನುವುದು ಎಲ್ಲರ ಆಸೆಯಾಗಿತ್ತು ಕೂಡ. ಸದ್ಯದ ಮಾಹಿತಿ ಪ್ರಕಾರ ಕೆಜಿಎಫ್‌ ಚಾಪ್ಟರ್ 2’ರಲ್ಲಿ ಅನಂತ್ ಇರುವುದಿಲ್ಲವಂತೆ.

ಸಿನಿಮಾದಿಂದಲೇ ಅವರು ಹೊರನಡೆದಿದ್ದಾರೆ ಎನ್ನಲಾಗಿದೆ. ಇನ್ನು ಅನಂತ್ ನಾಗ್ ಸಿನಿಮಾದಲ್ಲಿ ನಟಿಸದೇ ಇರುವುದರಿಂದ ಅವರ ಭಾಗದ ಕಥೆಯನ್ನು ಕೊಂಚ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.